ಅತಿ ಹೆಚ್ಚು ಹಿಂದಿ ಹಾಗೂ ಇತರ ಭಾಷೆ ಚಿತ್ರಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದ ನಗರದ ಒಲಂಪಿಯಾ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿದಿದೆ. ಈ ಘಟನೆಯಿಂದಾಗಿ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಿರಂತರ ಮಳೆಗೆ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿದಿದ್ದು, ಬೀದಿ ಬದಿಯಲ್ಲಿ ವ್ಯಾಪರಗಳ ಮೇಲೆ ಬಿದ್ದಿದೆ ಇದರ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ತಬರೀಸ್, ಅರ್ಮಾನ್ ಎಂಬುವವರಿಗೆ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತಿದೆ. ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಿರುವ ಅಗ್ನಿಶಾಮಕ ದಳ. ಜೆಸಿಬಿ ಯಂತ್ರದ ಮೂಲಕ ರಕ್ಷಣಾ ಮಾಡಲಾಗಿದೆ.
1929ರಲ್ಲಿ ಟೂರಿಂಗ್ ಟಾಕೀಸ್ ಆಗಿ ಊರೂರಿನಲ್ಲಿ ಸುತ್ತಿ ಟೆಂಟ್ ಹಾಕಿ ಜನರಿಗೆ ಚಿತ್ರವನ್ನ ತೋರಿಸುತ್ತಿದ್ದ ಒಲಂಪಿಯಾ 1949ರಲ್ಲಿ ಶಾಶ್ವತ ಚಿತ್ರಮಂದಿರವಾಗಿ ನಿಗದಿತ ಸ್ಥಳದಲ್ಲಿ ಸ್ಥಾಪನೆಯಾಗಿತ್ತು. ಆದರೆ ಪ್ರೇಕ್ಷಕರ ಕೊರತೆಯಿಂದ 2020ರ ಕರೋನ ಸಮಯದಲ್ಲಿ ಮುಚ್ಚಲಾಗಿತ್ತು.