ಶಿಕ್ಷೆ ಧರ್ಮಕ್ಕಲ್ಲ ಕ್ರೂರತನಕ್ಕಾಗಲಿ, ಜಯ ಧರ್ಮಕ್ಕಲ್ಲ ಮಾನವೀಯತೆಗಾಗಲಿ

Most read

ಹಾಸನ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಎಂಬ ಯುವತಿಯನ್ನು ಚಾಕಿವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಕೊಲೆ ಪಾತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಎಸಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಸಂಘಟನೆಯ ಮುಖಂಡ ಸಲೀಂ ಕೊಲ್ಲಹಳ್ಳಿ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಎಂಬುವವಳನ್ನು  ಸಾರ್ವಜನಿಕವಾಗಿ ಚಾಕುವಿನಿಂದ ಚುಚ್ಚಿ ಕೊಲೆಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಇದನ್ನು ನಮ್ಮ ಸಂಘಟನೆಯು  ಉಘ್ರವಾಗಿ ಖಂಡಿಸುತ್ತದೆ,  ಇದಕ್ಕೆ ಯಾವುದೆ ರಾಜಕೀಯ, ಧರ್ಮ, ಜಾತಿಯ  ಲೇಪವನ್ನು  ಅಂಟಿಸದೆ ಆರೋಪಿಯನ್ನು ಶಿಕ್ಷಿಸಬೇಕು ಎಂದ ಅವರು  ನ್ಯಾಯಾಂಗ ವ್ಯವಸ್ಥೆ ಆರೋಪಿ ಕೊಲೆಪಾತಕನಿಗೆ  ಕಠಿಣ ಶಿಕ್ಷೆ ವಿಧಿಸಬೇಕು ಎಂದರು.

ಪುರಸಭೆ ಮಾಜಿ ಅದ್ಯಕ್ಷ ಹಾಗೂ ಮುಸ್ಲಿಂ ಮುಖಂಡ ಸೈಯದ್ ಮುಫೀಜ್ ಮಾತನಾಡಿ, ತಪ್ಪು ಯಾರೇ ಮಾಡಿದರೂ ಅದು ತಪ್ಪೇ ಇದಕ್ಕಾಗಿ ಶಿಕ್ಷೆ ಧರ್ಮಕ್ಕಲ್ಲ ಕ್ರೂರಿಗಳ ಕ್ರೂರಿತನಕ್ಕಾಗಲಿ,ಜಯ ಧರ್ಮಕ್ಕಲ್ಲ  ಹೆಣ್ಣಿನ ಉಳುವಿಗಾಗಲಿ ಮಾನವೀಯತೆ ಉಳಿಯಬೇಕು. ಇಂತಹ ಘಟನೆಗಳನ್ನು ಮುಸ್ಲಿಂ ಒಕ್ಕೂಟ ಖಂಡಿಸುತ್ತದೆ. ರಾಜ್ಯದಲ್ಲಿ ಇಲ್ಲಿಯವರೆಗೆ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರದ ಪ್ರಕರಣದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರುಗಳಾದ, ಸಲೀಂ ಕೊಲ್ಲಹಳ್ಳಿ, ಸೈಯದ್ ಮುಫೀಜ್, ತಸ್ಲೀಮ್, ಹನೀಫ್, ಮಹಮ್ಮದ್, ಜಾಕೀರ್, ಬಿಲ್ಕಸ್ ರಾಣಿ, ಹಸೀನಾ ಹುರುಡಿ,  ಸಾಯಿರಾ ಬಾನು , ಮುನ್ನ , ಇದ್ರೀಸ್  ಇತರರು ಇದ್ದರು.

More articles

Latest article