ಅತ್ತಿಗೆಯನ್ನು ಚುಡಾಯಿಸದಂತೆ ಬುದ್ಧಿ ಹೇಳಿದ್ದಕ್ಕೆ ಕೊಲೆ

ಕೋಲಾರ: ಬುದ್ಧಿ ಹೇಳಿದ್ದಕ್ಕೆ ಕೊಲೆ ಮಾಡಿ ಬಿಡುವುದೇ?
ಕೋಲಾರದಲ್ಲಿ ತನ್ನ ಅತ್ತಿಗೆಯನ್ನು ಚುಡಾಯಿಸಿದವನಿಗೆ ಇನ್ನು ಮುಂದೆ ಹೀಗೆ ನಡೆದುಕೊಳ್ಳದಂತೆ ಮೈದುನ ಅರ್ಬಾಜ್, ಅಮ್ಜದ್ ಎಂಬಾತನಿಗೆ ಎಚ್ಚರಿಕೆ ನೀಡಿದ್ದ. ಇದರಿಂದ ರೊಚ್ಚಿಗೆದ್ದ ಅಮ್ಜದ್ 25 ವರ್ಷದ ಅರ್ಬಾಜ್ ನನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ನಗರದ ಜಮಾಲ್ ಷಾ ನಗರದಲ್ಲಿ ತಡರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ತನ್ನ ಅತ್ತಿಗೆಯನ್ನು ಓಲೈಸಿಕೊಳ್ಳಲು ಅಮ್ಜದ್ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದ. ಇದೇ ವಿಷಯಕ್ಕೆ ಇಬ್ಬರ ನಡುವೆ ಎರಡು ಮೂರು ಬಾರಿ ಗಲಾಟೆ ನಡೆದಿತ್ತು. ನಿನ್ನೆ ರಾತ್ರಿ ಇಬ್ಬರ ನಡುವೆ ಮಾತಿಗೆ ಮಾತು ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ಆರೋಪಿ ಅಮ್ಜದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article

Most read