ಕಾಂಗ್ರೆಸ್‌ನ ಕ್ರೌಡ್‌ಫಂಡಿಂಗ್ ಅಭಿಯಾನಕ್ಕೆ ಇನ್ನೂ ದೇಣಿಗೆ ಬಂದಿಲ್ಲ ಎಂದು ಕಾಣಿಸುತ್ತಿದೆ. ಅದಕ್ಕೆ ಮಂಗಳವಾರದ ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ಸಮೋಸಾ ಇರಲಿಲ್ಲ ಎಂದು ಹೇಳುವ ಮೂಲಕ ಜೆಡಿಯು ನಾಯಕ ಸುನೀಲ್ ಕುಮಾರ್ ಪಿಂಟು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುನಿಲ್ ಕುಮಾರ್ ಪಿಂಟು ಈ ಹಿಂದೆ ಮಾತನಾಡಿ, ಈ ಹಿಂದೆ ಇಂಡಿಯಾ ಮೈತ್ರಿಕೂಟದ ಸಭೆಗಳಲ್ಲಿ ಚಹಾ ಮತ್ತು ಸಮೋಸಾಗಳು ಇರುತ್ತಿದ್ದವು, ಆದರೆ ನಾಲ್ಕನೇ ಇಂಡಿಯಾ ಬ್ಲಾಕ್ ಸಭೆಯಲ್ಲಿ ಕೇವಲ ಚಹಾ ಮತ್ತು ಬಿಸ್ಕೆಟ್‌ಗಳಿಗೆ ಸೀಮಿತವಾಗಿತ್ತು. ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಲ್ಕನೇ ಸಭೆಯು ಬೇಸರ ತಂದಿದೆ ಎಂದು ಹೇಳಿದರು.
ಜೆಡಿಯು ಸಂಸದರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಪ್ರತಿಕ್ರಿಸಿಯಿಸಿದ್ದು, ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವವರೆಗೂ ಇದೇ ರೀತಿಯ ದೂರುಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ.