ಇರಾನ್‌ನಿಂದ 550 ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ

ಇರಾನ್‌ನಿಂದ ಸ್ಥಳಾಂತರಗೊಂಡ 70 ಭಾರತೀಯ ವಿದ್ಯಾರ್ಥಿಗಳ ಆಗಮನ

ನವದೆಹಲಿ :  ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಇರಾನ್‌ನಿಂದ 550 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ದೃಢಪಡಿಸಿದೆ. 

ಭೂ ಮತ್ತು ವಾಯು ಮಾರ್ಗಗಳ ಮೂಲಕ ಸ್ಥಳಾಂತರಿಸುವ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಇರಾನ್‌ನಲ್ಲಿರುವ ಭಾರತೀಯ ನಾಗರಿಕರನ್ನು ನೆರೆಯ ಅರ್ಮೇನಿಯಾದಿಂದ ಕರೆತರಲಾಗುತ್ತಿದೆ. 

 ಭಾರತೀಯರನ್ನು ಯುದ್ಧಪೀಡಿತ ಪ್ರದೇಶದಿಂದ ಕರೆತರಲು ಅರ್ಮೇನಿಯಾ ಸರ್ಕಾರ ಸಹಾಯ ಮಾಡಿದೆ. ವಿದೇಶಾಂಗ ಸಚಿವ  ಎಸ್. ಜೈಶಂಕರ್ ಸೋಮವಾರ ಅರ್ಮೇನಿಯಾಗೆ ಕೃತಜ್ಞತೆ ಸಲ್ಲಿಸಿದರು ಮತ್ತು  ಪ್ರಾದೇಶಿಕ ಬಿಕ್ಕಟ್ಟಿನ ಮಧ್ಯೆ ಸ್ಥಳಾಂತರಿಸುವ ಪ್ರಯತ್ನಗಳ ಸಮಯದಲ್ಲಿ ಅದರ ಸಹಕಾರವನ್ನು ಶ್ಲಾಘಿಸಿದರು.

ಮೊದಲ ಬ್ಯಾಚ್ ವಿದ್ಯಾರ್ಥಿಗಳು ದೆಹಲಿಗೆ ಮರಳಿದ್ದಾರೆ : ಇರಾನ್‌ನಿಂದ ಸ್ಥಳಾಂತರಿಸಲಾದ 70 ಭಾರತೀಯ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಭಾನುವಾರ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಆಗಮಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ (ಜೆಕೆಎಸ್‌ಎ) ದೃಢಪಡಿಸಿದೆ.

ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತವನ್ನು ತಲುಪುವ ಮೊದಲು ಕಷ್ಟಕರವಾದ ಸಾರಿಗೆ ಮಾರ್ಗವನ್ನು ಅನುಸರಿಸಿದರು ಎಂದು ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹೇಹಾಮಿ ಹೇಳಿದರು.
ಅಧಿಕಾರಿಗಳ ಸಮನ್ವಯದೊಂದಿಗೆ  ಭೂ ಮತ್ತು ವಾಯು ಪ್ರಯಾಣದ ಮೂಲಕ, ಅರ್ಮೇನಿಯಾ ಮತ್ತು ದುಬೈ ಗೆ ತಲುಪಿದ  ವಿದ್ಯಾರ್ಥಿಗಳನ್ನು ವಾಣಿಜ್ಯ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿದೆ. 

ಮುಂದುವರೆದ ಸರ್ಕಾರದ ಪ್ರಯತ್ನಗಳು : ಭಾರತ ಸರ್ಕಾರವು ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ಸಹಾಯ ಮಾಡಲು ಪ್ರಯತ್ನಗಳನ್ನು ಮುಂದುವರೆಸುತ್ತಿದೆ. 

ಸಚಿವಾಲಯವು ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ದೇಶವನ್ನು ತೊರೆಯಲು ಬಯಸುವವರಿಗೆ ಸಹಾಯ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.

More articles

Latest article

Most read