ಸಾವಿರಾರು ಕೋಟಿ ರೂ ಸಾಲ ವಂಚನೆ: ವಿಚಾರಣೆಗೆ ಹಾಜರಾಗಲು ಅನಿಲ್ ಅಂಬಾನಿಗೆ ಇ.ಡಿ ಸಮನ್ಸ್‌

ನವದೆಹಲಿ: ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್‌ ಸಾಲ ವಂಚನೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಆಗಸ್ಟ್‌ .5ರಂದು ವಿಚಾರಣೆಗೆ ಹಾಜರಾಗುವಂತೆ ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ಜಾರಿ ಮಾಡಿದೆ.

66 ವರ್ಷದ ಅನಿಲ್‌ ಅವರನ್ನು ದೆಹಲಿಯ ಇ.ಡಿ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಅನಿಲ್‌ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ರಿಲಯನ್ಸ್‌ ಸಮೂಹಕ್ಕೆ ಸೇರಿದ ಕಾರ್ಯನಿರ್ವಾಹಕರಿಗೂ ಸಮನ್ಸ್‌ ನೀಡಲಾಗುತ್ತದೆ ಎಂದು ಇಡಿ ಮೂಲಗಳು ತಿಳಿಸಿವೆ.

ಕಳೆದ ವಾರ 50 ಕಂಪನಿಗಳ 35 ಸ್ಥಳಗಳು ಹಾಗೂ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕರು ಸೇರಿದಂತೆ 25 ವ್ಯಕ್ತಿಗಳಿಗೆ ಸೇರಿದ ಜಾಗಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

ರಿಲಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ ಸೇರಿದಂತೆ ಅನಿಲ್‌ ಅಂಬಾನಿ ಅವರ ಬಹು ಸಮೂಹ ಸಂಸ್ಥೆಗಳಿಂದ ರೂ.17 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಹಣ ಅಕ್ರಮ ನಡೆಸಿರುವುದರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article

Most read