ಮೋದಿ ಭ್ರಷ್ಟಾಚಾರದ ಚಾಂಪಿಯನ್‌, ಚುನಾವಣಾ ಬಾಂಡ್‌ ಜಗತ್ತಿನ ಅತಿದೊಡ್ಡ ಸುಲಿಗೆ ಸ್ಕೀಮ್: ರಾಹುಲ್ ಗಾಂಧಿ ವಾಗ್ದಾಳಿ

Most read

ಗಾಜಿಯಾಬಾದ್ (ಉತ್ತರಪ್ರದೇಶ): ಚುನಾವಣಾ ಬಾಂಡ್‌ ಯೋಜನೆ ಜಗತ್ತಿನ ಅತಿದೊಡ್ಡ ಸುಲಿಗೆ ಸ್ಕೀಂ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ನರೇಂದ್ರ ಮೋದಿ ಭ್ರಷ್ಟಾಚಾರದ ಚಾಂಪಿಯನ್‌ ಎಂದು ಬಣ್ಣಿಸಿದ್ದಾರೆ.

ಇಂಡಿಯಾ ಮೈತ್ರಿಕೂಟದ ಅಂಗಪಕ್ಷ ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್‌ ಯಾದವರ್‌ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಇತ್ತೀಚಿಗೆ ನೀಡಿದ ಸಂದರ್ಶ scripted ಆಗಿತ್ತು ಎಂದು ಟೀಕಿಸಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಧಾನಿ ANI ಸುದ್ದಿಸಂಸ್ಥೆಗೆ ಒಂದು ಸುದೀರ್ಘ ಸಂದರ್ಶನ ನೀಡಿದರು. ಅದು scripted ಆಗಿತ್ತು. ಆದರೆ ಅದೊಂದು ಫ್ಲಾಪ್‌ ಶೋ ಆಯಿತು. ರಾಜಕಾರಣದಲ್ಲಿ ಪಾರರ್ಶಕತೆ ತರಲು, ರಾಜಕಾರಣವನ್ನು ಶುದ್ಧಗೊಳಿಸಲು ಚುನಾವಣಾ ಬಾಂಡ್‌ ಯೋಜನೆ ತರಲಾಯಿತು ಎಂದು ಅವರು ಹೇಳಿದರು. ಇದು ನಿಜವೇ ಆಗಿದ್ದಲ್ಲಿ, ಸುಪ್ರೀಂ ಕೋರ್ಟ್‌ ಯಾಕೆ ಚುನಾವಣಾ ಬಾಂಡ್‌ ಅಸಂವಿಧಾನಿಕ ಎಂದು ಹೇಳಿ ರದ್ದುಗೊಳಿಸಿತು? ಬಾಂಡ್‌ ಯೋಜನೆ ಪಾರದರ್ಶಕತೆ ತರುವ ಉದ್ದೇಶ ಹೊಂದಿದ್ದರೆ, ಭಾರತೀಯ ಜನತಾ ಪಕ್ಷಕ್ಕೆ ಹಣ ಕೊಟ್ಟವರ ಹೆಸರುಗಳನ್ನು ಯಾಕೆ ಮುಚ್ಚಿಟ್ಟಿರಿ? ಯಾವ ಯಾವ ದಿನಾಂಕಗಳಂದು ಅವರು ನಿಮಗೆ ಹಣ ಕೊಟ್ಟರು ಎಂಬುದನ್ನೇಕೆ ಮುಚ್ಚಿಚ್ಟಿರಿ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದರು.

ಚುನಾವಣಾ ಬಾಂಡ್‌, ಜಗತ್ತಿನ ಅತಿ ದೊಡ್ಡ ಸುಲಿಗೆ ಯೋಜನೆ. ಇದನ್ನು ದೇಶದ ಎಲ್ಲ ಉದ್ಯಮಿಗಳು ಅರ್ಥ ಮಾಡಿಕೊಂಡಿದ್ದಾರೆ. ಈ ಕುರಿತು ನೀವು ಎಷ್ಟೇ ಸ್ಪಷ್ಟನೆಗಳನ್ನು ನೀಡಿದರೂ ಪ್ರಯೋಜನವಿಲ್ಲ. ಯಾಕೆಂದರೆ ದೇಶದ ಜನರು ಮೋದಿ ಭ್ರಷ್ಟಾಚಾರದ ಚಾಂಪಿಯನ್‌ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ನುಡಿದರು.

ಆರ್‌ ಎಸ್‌ ಎಸ್‌ ಮತ್ತು ಬಿಜೆಪಿ ಭಾರತದ ಸಂವಿಧಾನವನ್ನು ನಾಶಗೊಳಿಸುತ್ತಿವೆ ಎಂದು ಆರೋಪಿಸಿದ ಅವರು, ಇಂಡಿಯಾ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ಪಕ್ಷ ನಮ್ಮ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಈ ಚುನಾವಣೆಯಲ್ಲಿ ಎರಡು ಮೂರು ಮುಖ್ಯ ವಿಷಯಗಳಿವೆ. ನಿರುದ್ಯೋಗ ಸಮಸ್ಯೆ ಅತಿದೊಡ್ಡ ಚುನಾವಣಾ ವಿಷಯವಾಗಿದೆ. ಹಾಗೆಯೇ ಬೆಲೆ ಏರಿಕೆ ಕೂಡ ಜನರನ್ನು ಬಾಧಿಸುತ್ತಿದೆ. ಆದರೆ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಭಾರತೀಯ ಜನತಾ ಪಕ್ಷ ಯತ್ನಿಸುತ್ತಿದೆ. ಮೋದಿಯಾಗಲೀ, ಬಿಜೆಪಿಯಾಗಲೀ ಜನರ ನಿಜವಾದ ಸಮಸ್ಯೆಗಳ ಕುರಿತು ಮಾತನಾಡುವುದಿಲ್ಲ ಎಂದು ಅವರು ಹೇಳಿದರು.

More articles

Latest article