ಅತ್ಯಾಚಾರ ಪ್ರಕರಣ ಸಂಬಂಧ ಕಸ್ಟಡಿಯಲ್ಲಿರುವ ಶಾಸಕ ಮುನಿರತ್ನ ನಾಯ್ಡು ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ.
ಬೆಂಗಳೂರಿನ ವೈಯ್ಯಾಲಿಕಾವಲ್ನಲ್ಲಿರುವ ಮುನಿರತ್ನ ಮನೆಗೆ ಬೆಳಗ್ಗೆ 7:30ರ ಸುಮಾರಿಗೆ ಆಗಮಿಸಿದ ಡಿವೈಎಸ್ಪಿ ಕವಿತಾ ನೇತೃತ್ವದ ತಂಡ ಮನೆಯಲ್ಲಿದ್ದ ದಾಖಲೆಗಳು, ಡಿಜಿಟಲ್ ಎವಿಡೆನ್ಸ್ ಶೋಧ ನಡೆಯುತ್ತಿದೆ.
3 ವಾಹನಗಳಲ್ಲಿ FSL ತಂಡದೊಂದಿಗೆ ಆಗಮಿಸಿದ 15ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ. ವೈಯ್ಯಾಲಿಕಾವಲ್ ಮನೆ ಸೇರಿದಂತೆ ಇನ್ನು ಹಲವಡೆ ಎಸ್ಐಟಿ ದಾಳಿ ನಡೆದಿದೆ.
ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮುನಿರತ್ನ ನಾಯ್ಡು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ನನ್ನ ಸೇವೆ ಗುರುತಿಸಿ ಕರೆ ಮಾಡಿದ್ದ ಮುನಿರತ್ನ ನಾಯ್ಡು, ನನ್ನನ್ನು ಬಂದು ಭೇಟಿ ಮಾಡಿ ಅಂತ ಹೇಳಿದ್ದರು.
ಇನ್ನು ಅತ್ಯಾಚಾರ ಪ್ರಕರಣ ಸಂಬಂಧ ನೆಲಮಂಗಲ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಅತ್ಯಾಚಾರ ನಡೆದಿದೆ ಎನ್ನಲಾದ ಜೆಪಿ ಪಾರ್ಕ್ ಬಳಿಯ ಶೆಡ್‌ನಲ್ಲಿ ಮಹಜರು ಕಾರ್ಯ ಮಾಡಲಾಗಿದೆ. ಮಹಜರು ಬಳಿಕ ಪೊಲೀಸರು ಗೋಡೌನ್ ಸೀಲ್ ಮಾಡಿದ್ದಾರೆ.
ಜಾತಿನಿಂದನೆ ಹಾಗೂ ವಂಚನೆ ಪ್ರಕರಣದಲ್ಲಿಶಾಸಕ ಮುನಿರತ್ನ ನಾಯ್ಡುಗೆ ಈಗಾಗಲೆ ಜಾಮಿನು ಸಿಕ್ಕಿತ್ತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್, ಇಬ್ಬರು ಶ್ಯೂರಿಟಿ, 2 ಲಕ್ಷ ರೂಪಾಯಿ ಬಾಂಡ್ ಆಧಾರದಲ್ಲಿ ಜಾಮೀನು ಮಂಜೂರು ಮಾಡಿತ್ತು.