ಸುಳ್ಳು ಹೇಳಿ ಮೋದಿ ತಮ್ಮ ಅಜ್ಞಾನ ತೋರ್ಪಡಿಸುತ್ತಿದ್ದಾರೆ: ದಿನೇಶ್ ಗುಂಡುರಾವ್

Most read

ಬೆಂಗಳೂರು: ಸೋಲಿನ ಭಯದಿಂದ ಪ್ರಧಾನಿ ಮೋದಿಯವರು ಸುಳ್ಳು ಭಾಷಣವನ್ನು ಆಶ್ರಯಿಸಿದ್ದಾರೆ. ಸೋಲಿನ ಭೀತಿಯಿಂದ ಬೌದ್ಧಿಕ ಅದಃಪಥನಕ್ಕೆ ಹೋಗಿರುವ ಮೋದಿ, ಯಾವುದನ್ನೂ ಯೋಚಿಸದೇ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಮಾತನಾಡಲು ಹೋಗಿ ಹೋದಲ್ಲೆಲ್ಲಾ ಮೋದಿ ನಗ್ನ ಸುಳ್ಳುಗಳನ್ನು ಪ್ರತಿಪಾದನೆ ಮಾಡುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರು ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಇದು ಬಹಳ‌ ನೋವಿನ ಸಂಗತಿ. ಕಾಂಗ್ರೆಸ್ ದಲಿತರ ಮೀಸಲಾತಿ ಕಡಿತ ಮಾಡುತ್ತಾರೆ ಎಂದು ಯಾವುದೇ ಆಧಾರದವಿಲ್ಲದೇ ಮಾತನಾಡುತ್ತಿದ್ದಾರೆ. ಮೋದಿ ಹೇಳಿಕೆ ಸತ್ಯವಾಗಿದ್ದರೆ ದಾಖಲೆ ಸಮೇತ ಹೊರ ತರಬೇಕಾಗುತ್ತದೆ. ಯಾವ ತರಹ ಓಬಿಸಿಯವರಿಗೆ ಮೀಸಲಾತಿ ಕಡಿತ ಆಗಿದೆ ಎಂಬ ಆದೇಶ ತೋರಿಸಲಿ ಸವಾಲು ಹಾಕಿದರು.

ಯಾವ ಮಾಹಿತಿ ಇಲ್ಲದೆ ಮೋದಿ ಸುಳ್ಳುಗಳನ್ನು ಹೇಳುತ್ತಾ ಪ್ರಚೋದನಕಾರಿ ದ್ವೇಷದ ಭಾಷಣ ಮಾಡುತ್ತಿದ್ದಾರೆ. ಕರ್ನಾಟಕದ ಇತಿಹಾಸ ತಿಳಿದುಕೊಂಡು ಮೋದಿ ಮಾತನಾಡಲಿ. ನಾವು ಹಿಂದುಳಿದ ಜಾತಿ ಎನ್ನುವುದಿಲ್ಲ, ಹಿಂದುಳಿದ ವರ್ಗ ಎನ್ನುತ್ತೇವೆ. ಚಿನ್ನಪ್ಪರೆಡ್ಡಿ ವರದಿಯ  ಆಧರಿಸಿಯೇ ಮುಸ್ಲೀಂ ರಿಗೆ ಮೀಸಲಾತಿ ನೀಡಲಾಗಿದೆ. ಕೇವಲ ಮುಸಲ್ಮಾನರಿಗೆ ಮಾತ್ರ ಮೀಸಲಾತಿ ನೀಡಿಲ್ಲ. ಇದನ್ನು ಈಗ ಯಾಕೆ ಪ್ರಶ್ನೆಮಾಡ್ತಿದ್ದೀರಿ? ಹತ್ತು ವರ್ಷ ಯಾಕೆ ಇದರ ಬಗ್ಗೆ ಮಾತನಾಡಿಲ್ಲ ಮೋದಿ? ಮೀಸಲಾತಿ ಬದಲಾವಣೆ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇಲ್ಲ. ದಲಿತರ, ಹಿಂದುಳಿದ ವರ್ಗದ ಮೀಸಲಾತಿ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ. ಇಂತ ಹಸಿ ಸುಳ್ಳುಗಳನ್ನು ಹೇಳುವ ಮೂಲಕ ನರೇಂದ್ರ ಮೋದಿ ತಮ್ಮ ಅಜ್ಞಾನವನ್ನು ಜನತೆಗೆ ತೋರಿಸುತ್ತಿದ್ದಾರೆ ಎಂದರು.

ಸುಳ್ಳು ಹೇಳುವುದರಲ್ಲಿ ಮೋದಿ, ಯತ್ನಾಳ್ ಗೆ ಕಾಂಪಿಟೇಷನ್

ಸುಳ್ಳು ಹೇಳುವುದರಲ್ಲಿ ಬಿಜೆಪಿಯಲ್ಲಿ ಯತ್ನಾಳ್ ಗೆ ಕಾಂಪಿಟೇಟರ್ ಇಲ್ಲ ಎಂದುಕೊಂಡಿದ್ದೆ. ಯತ್ನಾಳ್ ಗೆ ಇದೀಗ ಮೋದಿಯೇ ಕಾಂಪಿಟೇಟರ್ ಆಗಿದ್ದಾರೆ. ಯತ್ನಾಳ್ ಗಿಂತ ಕೆಳಮಟ್ಟದ ಸುಳ್ಳು ಹೇಳಿಕೆಗಳನ್ನು ಮೋದಿ ಕೊಡುತ್ತಿದ್ದಾರೆ. ಇದು ಖಂಡನೀಯ ಮಾತುಗಳು ಎಂದಿದ್ದಾರೆ.

More articles

Latest article