ಹೊಸದಿಲ್ಲಿ: ದೆಹಲಿ ಮೆಟ್ರೋದ ಮೆಜೆಂಟಾ ಲೈನ್ಗೆ ನಾಲ್ಕನೇ ಹಂತದಲ್ಲಿ ಸೇರ್ಪಡೆಗೊಳ್ಳಲಿರುವ ಚಾಲಕ ರಹಿತ ರೈಲನ್ನು ಮುಖ್ಯಮಂತ್ರಿ ಅತಿಶಿ ಮಂಗಳವಾರ ಪರಿಶೀಲಿಸಿದರು.
“ಇದು ದೆಹಲಿಗೆ ಹೆಮ್ಮೆಯ ಕ್ಷಣ” ಎಂದು ಸಿಎಂ ಅತಿಶಿ ತಮ್ಮ “ಎಕ್ಸ್”ನ ಪೋಸ್ಟ್ನಲ್ಲಿ ಬಣ್ಣಿಸಿದ್ದಾರೆ.
ದೆಹಲಿ ಮೆಟ್ರೋದ 4 ನೇ ಹಂತದ ವಿಸ್ತರಣೆಗಾಗಿ ಆರು ಕೋಚ್ಗಳನ್ನು ಒಳಗೊಂಡಿರುವ ಮೊದಲ ರೈಲು ಮುಕುಂದಪುರ ಡಿಪೋಗೆ ಆಗಮಿಸಿದೆ.