ಪಹಲ್ಗಾಮ್ ದುರಂತ ನೆನಪಿಗೆ ಸ್ಮಾರಕ ನಿರ್ಮಾಣ: ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಗೋಷಣೆ

ಕಾಶ್ಮೀರ: ಏಪ್ರಿಲ್ 22, 2025ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದುರಂತದ ಸ್ಮರಣಾರ್ಥ ಬೈಸರನ್ನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಘೋಷಿಸಿದ್ದಾರೆ. ಪಹಲ್ಗಾಮ್ ನ ಬೈಸರನ್ ಉದ್ಯಾನವನದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಬಲಿಯಾಗಿದ್ದರು.

ಈ ದಾಳಿಯಿಂದ ಬಲಿಯಾದ 26 ಜನರಿಗೆ ಗೌರವ ಸಲ್ಲಿಸಲು ಬೈಸರನ್ನಲ್ಲಿ ಸ್ಮಾರಕವನ್ನು ಸ್ಥಾಪಿಸುತ್ತೇವೆ. ಇದು ಶಾಶ್ವತ ಗೌರವವಾಗಿದ್ದು, ಅವರನ್ನು ಎಂದಿಗೂ ಮರೆಯಲಾಗದ ನೆನಪು ನಮ್ಮಲ್ಲಿ ಉಳಿದಿರುತ್ತದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಪ್ರವಾಸ ಮತ್ತು ಪ್ರಯಾಣ ನಿರ್ವಾಹಕರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕ್ಷೀಣಿಸುತ್ತಿರುವ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ. ಸಂಪುಟ ಸಭೆಯಲ್ಲಿ, ಸ್ಮಾರಕಕ್ಕೆ ತಾತ್ವಿಕ ಅನುಮೋದನೆ ನೀಡಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಪಹಲ್ಗಾಮ್ ನ ನಿವಾಸಿಗಳ ಜೊತೆ ಒಗ್ಗಟ್ಟನ್ನು ತೋರಲು ಸಿಎಂ ಒಮರ್ ಅಬ್ದುಲ್ಲಾ ಪಹಲ್ಗಾಮ್ನಲ್ಲಿ ವಿಶೇಷ ಸಂಪುಟ ಸಭೆ ಕರೆದಿದ್ದರು. ಪ್ರವಾಸೋದ್ಯಮ ನನ್ನ ಜವಾಬ್ದಾರಿಯಾದರೂ, ಭದ್ರತೆ ನನ್ನ ವ್ಯಾಪ್ತಿಯಿಂದ ಹೊರಗಿದೆ ಎಂದು ಅವರು ಹೇಳಿದರು. ಪೀಪಲ್ಸ್ ಆಕ್ಷನ್ ಎಂಬ ಸ್ವಯಂಸೇವಾ ಸಂಸ್ಥೆ ಮೇ 2ರಂದು ಸಿಎಂಗೆ ಪತ್ರ ಬರೆದು, ಬೈಸರನ್ ಕಣಿವೆಯಲ್ಲಿ ಸ್ಮಾರಕ ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಿತ್ತು. ಈ ಪತ್ರದಲ್ಲಿ, ಭಯೋತ್ಪಾದನೆ ಮತ್ತು ಧಾರ್ಮಿಕ ಕಿರುಕುಳದ ವಿರುದ್ಧ ಜಮ್ಮು ಕಾಶ್ಮೀರದ ದೀರ್ಘಕಾಲದ ಹೋರಾಟವನ್ನು ನೆನಪಿಸುವ, ಮುಗ್ಧ ಜೀವಗಳ ನಷ್ಟವನ್ನು ಒಪ್ಪಿಕೊಳ್ಳುವ ಸ್ಮಾರಕದ ಅಗತ್ಯವನ್ನು ಒತ್ತಿ ಹೇಳಲಾಗಿತ್ತು.

More articles

Latest article

Most read