ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಮೇಘರಾಜ್ ಗುದ್ದಟ್ಟಿ ಅವರು. ”ಬ್ಯಾನ್ ರಮ್ಮಿ ಮತ್ತು ಡ್ರೀಮ್ 11” ಎಂದು ಇಳಕಲ್ ಸೀರೆ ಮೇಲೆ ನೇಯ್ದು ಆ ಸೀರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಆನ್ ಲೈನ್ ರಮ್ಮಿಗೆ ನಿಷೇಧ ಹೇರುವಂತೆ ವಿನೂತನ ಶೈಲಿಯಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ಆನ್ ಲೈನ್ ಜೂಜಾಟದಿಂದ ಅಸಂಖ್ಯಾತ ಕುಟುಂಬಗಳು ಬೀದಿಗೆ ಬಿದ್ದಿವೆ. ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಈ ಜೂಜಾಟಕ್ಕೆ ನಿಷೇಧ ಹೇರಬೇಕು ಎಂದು ವಿನೂತನ ಶೈಲಿಯಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಮೇಘರಾಜ್ ಹೇಳಿದ್ದಾರೆ.
ಮೇಘರಾಜ್ ಈ ಹಿಂದೆ ಇಳಕಲ್ ಸೀರೆಯಲ್ಲಿ ಸೂರ್ಯಯಾನ-3 ಯಶಸ್ವಿಯಾದಾಗ ವಿಜ್ಞಾನಿಗಳಿಗೆ ಶುಭಾಶಯ ಎಂದು ಸೀರೆಯಲ್ಲಿ ನೇಯುವ ಮೂಲಕ ಗಮ ಸೆಳೆದಿದ್ದರು. ಪುನೀತ್ ರಾಜಕುಮಾರ್ಅವರ ಕೊನೆಯ ಚಿತ್ರ ಜೇಮ್ಸ್ ಶತದಿನ ಆಚರಿಸಲಿ ಎಂದೂ ಸೀರೆಯಲ್ಲಿ ನೇಯ್ದು ಶುಭಹಾರೈಸಿದ್ದರು. ಕಾಂತಾರ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಗಲಿ ಎಂದು ಸೀರೆಯಲ್ಲಿ ನೇಯ್ದು ಗಮನ ಸೆಳೆದಿದ್ದರು.