ಜೂನ್ ಮೊದಲ ವಾರದ ನಂತರ ಏಕನಾಥ ಶಿಂಧೆ ಅವರ ಸರಕಾರವೇ ಇರಲ್ಲ: ಸಚಿವ ಎಂ.ಬಿ. ಪಾಟೀಲ್ ತಿರುಗೇಟು

ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕ ಸರಕಾರ ಉರುಳಿ ಬೀಳಲಿದೆ ಎಂದು ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ದ ಸಚಿವ ಎಂ.ಬಿ. ಪಾಟೀಲ್ ಖಾರವಾಗಿ ವಾಗ್ದಾಳಿ ಮಾಡಿದ್ದಾರೆ. ಜೂನ್‌ ಮೊದಲ ವಾರದ ನಂತರ ಏಕನಾಥ ಶಿಂಧೆ ಅವರ ಸರಕಾರವೇ ಪತನವಾಗಲಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಂತರ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ 20 ಶಾಸಕರು ಕಾಂಗ್ರೆಸ್​ ಅನ್ನು ಸೇರಲಿದ್ದು, ಅವರೆಲ್ಲರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಸರಕಾರ ಬೀಳಿಸಲು ಇದು ಮಹಾರಾಷ್ಟ್ರವಲ್ಲ. ಜೂನ್ ಮೊದಲ ವಾರದ ನಂತರ ಶಿಂಧೆ ಅವರ ಸರಕಾರವೇ ಪತನವಾಗಿ, ಅವರೇ ಮಾಜಿ ಆಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.

ನಾವು 136 ಶಾಸಕರಿದ್ದೇವೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ನಮ್ಮ 89 ಶಾಸಕರು ಬಿಜೆಪಿಗೆ ಹೋಗಬೇಕು. ಈಗ ಬೇರೆ ಪಕ್ಷಕ್ಕೆ ಹೋಗುವ ದಡ್ಡರು ಯಾರೂ ಇಲ್ಲ. ಏಕನಾಥ ಶಿಂಧೆಗೆ ಶಕ್ತಿ ಇದ್ದರೆ ನಮ್ಮ ಐವರು ಶಾಸಕರನ್ನು ಮೊದಲು ತಮ್ಮತ್ತ ಸೆಳೆದುಕೊಂಡು ತೋರಿಸಲಿ. ಇನ್ನು ಒಂದೆರಡು ತಿಂಗಳಲ್ಲಿ ಆ ರಾಜ್ಯದಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಸರ್ಕಾರ ಬರಲಿದೆ ಎಂದು ಸಚಿವ ಎಂ ಬಿ ಪಾಟೀಲ್​ ಟಾಂಗ್​ ಕೊಟ್ಟರು.

More articles

Latest article

Most read