Sunday, September 8, 2024

ಎಚ್.ಡಿ.ದೇವೇಗೌಡರ ಕುರಿತ ಕೃತಿ ‘ಮಣ್ಣಿನ ಮಗʼ ಪುಸ್ತಕ ಇದೇ 29ರಂದು ಬಿಡುಗಡೆ

Most read

ಬೆಂಗಳೂರು: ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೊಟ್ಟಮೊದಲ ಕನ್ನಡಿಗರಾದ ಎಚ್.ಡಿ.ದೇವೇಗೌಡರ ಕುರಿತು ಕನ್ನಡ ಹೋರಾಟಗಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಆಗಿರುವ ನೇ.ಭ.ರಾಮಲಿಂಗ ಶೆಟ್ಟಿಯವರು ರಚಿಸಿದ ‘ಮಣ್ಣಿನ ಮಗʼ ಕೃತಿಯನ್ನು  ಫೆಬ್ರವರಿ 29ನೆಯ  ಗುರುವಾರ ಕನ್ನಡ ಸಾಹಿತ್ಯ ಪರಿಷತ್ ನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರʼ ದಲ್ಲಿ ಸಂಜೆ 5-00 ಗಂಟೆಗೆ ಬಿಡುಗಡೆ ಮಾಡಲಾಗುವುದು. ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ಈ ಕೃತಿಯ ಬಿಡುಗಡೆಗೆ ಕರ್ನಾಟಕ  ರಕ್ಷಣಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗ ನೀಡಿದೆ.

ಶ್ರೀ ಆದಿ ಚುಂಚನಗಿರಿ ಮಹಾಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದನಾಥ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದು ಉದ್ಘಾಟನೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿಯವರು ವಹಿಸಲಿದ್ದಾರೆ.

‘ಮಣ್ಣಿನ ಮಗʼ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಬಿಡುಗಡೆಮಾಡಲಿದ್ದು ಕೃತಿಯ  ಕುರಿತು  ನಾಡಿನ ಹಿರಿಯ ಸಂಶೋಧಕರಾದ ನಾಡೋಜ ಡಾ.ಹಂಪ ನಾಗರಾಜಯ್ಯನವರು ಮಾತನಾಡಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಖ್ಯಾತ ಹೃದಯ ತಜ್ಞರಾದ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ಮತ್ತು ಮಾಜಿ ವಿಧಾನ ಪರಿಷತ್ತಿನ ಸಭಾಪತಿಗಳಾದ ವಿ.ಆರ್.ಸುದರ್ಶನ್ ಅವರು ಭಾಗವಹಿಸಲಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ನೇ.ಭ.ರಾಮಲಿಂಗ ಶೆಟ್ಟರು ಆರು ವರ್ಷಗಳ ಕಾಲ ಸತತ ಶ್ರಮ ವಹಿಸಿ ಶ್ರೀ ದೇವೇಗೌಡರ ಕುರಿತು ಮಾಹಿತಿಗಳನ್ನು ಸಂಗ್ರಹಿಸಿ, ಅವರನ್ನು ಸಂದರ್ಶಿಸಿ ಈ ಕೃತಿಯನ್ನು ಸಿದ್ದ ಪಡಿಸಿದ್ದಾರೆ. ರಾಜಕಾರಣದ ಮೊಗ್ಗಲು ಮತ್ತು ವ್ಯಕ್ತಿ ಚಿತ್ರಣದ ಮೊಗ್ಗಲು ಎರಡನ್ನೂ ಸರಿದೂಗಿಸಿರುವ ಈ ಕೃತಿ ಎಲ್ಲಿಯೂ ವೈಭವೀಕರಣಕ್ಕೆ ಹೋಗದೆ ವಾಸ್ತವಿಕ ನೆಲೆಗಟ್ಟಿನಲ್ಲಿಯೇ ಸಾಗಿದೆ. ದೇವೇಗೌಡರ ಕುರಿತು ಮಹತ್ವದ ಚಿತ್ರಣಗಳನ್ನು ಕಟ್ಟಿ ಕೊಡುತ್ತದೆ.

ಈ ಕೃತಿಯನ್ನು ಸ್ನೇಹ ಬುಕ್ ಹೌಸ್ನ ಕೆ.ಬಿ.ಪರಶಿವಪ್ಪ ಅವರು ಪ್ರಕಟಿಸಿದ್ದಾರೆ.

More articles

Latest article