ಬೆಂಗಳೂರು: ಗಾಳಿಪಟಗಳನ್ನು ಹಾರಿಸಲು ಚೀನಿ Catch
ದಾರಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಇದರಿಂದ ಪ್ರಾಣಿ ಪಕ್ಷಿಗಳ ಜೀವಕ್ಕ್ ಕುತ್ತು ಬಂದಿದೆ. ಜತೆಗೆ ಮನುಷ್ಯರ ಕುತ್ತಿಗೆಗೆ ಈ ದಾರ ಸುತ್ತಿಕೊಂಡು ಪ್ರಾಣ ಬಿಟ್ಟಿರುವ ಉದಾಹರಣೆಗಳೂ ಉಂಟು. ಇದೀಗ ರಾಜ್ಯ ಸರಕಾರ ಗಾಳಿಪಟಗಳನ್ನು ಹಾರಿಸುವ ಸಂಬಂಧ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಹತ್ತಿಯಿಂದ ಮಾಡಿದ ದಾರಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ.
ಯಾವುದೇ ಅಂಗಡಿಗಳು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಅಥವಾ ವ್ಯಕ್ತಿ ನೈಲಾನ್ ಮತ್ತು ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಬಳಸಿ ಚೀನಿ ಮಾಂಜಾ, ಚೀನಿ ದಾರಗಳನ್ನು ತಯಾರು ಮಾಡುವುದು, ದಾಸ್ತಾನು ಮಾಡುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಯಾವುದೇ ಕಾರಣಕ್ಕೂ ಇವುಗಳನ್ನು ಗಾಳಿಪಟಗಳಿಗೆ ಬಳಸುವಂತಿಲ್ಲ. ಹತ್ತಿಯಿಂದ ಮಾಡಿದ ದಾರಗಳಿಗೂ ಚೂಪಾದ, ಲೋಹ ಅಥವಾ ಗಾಜಿನ ವಸ್ತುಗಳನ್ನು ಬಳಸುವಂತಿಲ್ಲ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಈ ಸಂಬಂಧ 2017 ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು.