ಜಿಲ್ಲಾಧಿಕಾರಿಗಳ ಮನವಿಗೂ ಕ್ಯಾರೆ ಅನ್ನದ ಸಂಘಪರಿವಾರದ ಸಂಘಟನೆಗಳು : ಇಂದು ಮಂಡ್ಯ ಬಂದ್, ಬೈಕ್ ರ್ಯಾಲಿ!

ಸಕ್ಕರೆ ನಾಡು ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ತೆರವು ಖಂಡಿಸಿ ಇಂದು ಸಂಘಪರಿವಾರದ ಸಂಘಟನೆಗಳು ಮಂಡ್ಯ ಬಂದ್‌‌ಗೆ ಕರೆ ನೀಡಿವೆ. ಕೆರಗೋಡು ಗ್ರಾಮದದಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್‌ ಬೈಕ್‌ ರ್ಯಾಲಿ ನಡೆಯಲಿದೆ.

ಬಂದ್ ಕೈಬಿಡುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದರೂ ಕ್ಯಾರೆ ಅನ್ನದ ಸಂಘಪರಿವಾರದ ಸಂಘಟನೆಗಳು ಬಂದ್ ಕರೆ ನೀಡಿ ಇಂದು ಬೈಕ್ ರ್ಯಾಲಿ ಸಹ ಕೈಕೊಂಡಿದ್ದಾರೆ.

ಇತ್ತ ಬಂದ್ ಕೈಬಿಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಜಿಲ್ಲಾಡಳಿತದ ಮನವಿಗೆ ಸ್ಪಂಧಿಸಿ ಫೆಬ್ರವರಿ 7ರ ಬಂದ್ ಅನ್ನು ಸಮಾನ ಮನಸ್ಕರ ವೇದಿಕೆ ಹಿಂಪಡೆದಿತ್ತು.

ನಿನ್ನೆ ಮಂಡ್ಯ ನಗರ ಬಂದ್‌ಗೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡುವಂತೆ ನಿನ್ನೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ನಗರದ ಅಂಗಡಿ ವ್ಯಾಪಾರಿಗಳಿಗೆ ಮನವಿ ಮಾಡಿದ್ದರು.

ಬಂದ್​ಗೆ ಬೆಂಬಲ ನೀಡುವ ಕುರಿತು ಮಾತನಾಡಿದ್ದ ಮಂಡ್ಯ ಬಿಜೆಪಿ ಮುಖಂಡ ಜಯರಾಂ, ಬಂದ್​​ಗೆ ಬಿಜೆಪಿ, ಜೆಡಿಎಸ್ ಪಕ್ಷಗಳು ಬೆಂಬಲ ನೀಡುತ್ತಿಲ್ಲ. ಅಲ್ಲದೆ ಅಂಗಡಿ ಮುಗ್ಗಟ್ಟುಗಳನ್ನ ಬಲವಂತವಾಗಿ ಮುಚ್ಚಿಸುವುದಿಲ್ಲ. ಆದರೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರೆ ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.

More articles

Latest article

Most read