ಪ್ರಬಲ ಬುಡಕಟ್ಟು ನಾಯಕರಾದ ಹೇಮಂತ್ ಸೋರೆನ್ ಅವರ ಅನ್ಯಾಯದ ಬಂಧನವನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭೂ ಹಗರಣದ ಅಕ್ರಮ ಹಣವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ (ಜಾರಿ ನಿರ್ದೇಶನಲಯ)ಯು ಜಾರ್ಖಂಡ್ ನ ಮುಖ್ಯಮಂತ್ರಿ ಆಗಿದ್ದ ಹೇಮಂತ್ ಸೊರೆನ್ ಅವರನ್ನು ಬುಧವಾರ ಬಂದಿಸಿತ್ತು. ಈ ಬಂಧನವನ್ನು ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ʼಎಕ್ಸ್ʼ ಖಾತೆಯಲ್ಲಿ ಹಂಚಿಕೊಂಡಿ, ʼಬಿಜೆಪಿಯು ತನ್ನ ಬೆಂಬಲಿತ ಕೇಂದ್ರೀಯ ಏಜೆನ್ಸಿಗಳ ಮೂಲಕ ತನ್ನ ಸೇಡನ್ನು ಜನಪ್ರಿಯವಾಗಿ ಚುನಾಯಿತ ಸರ್ಕಾರವನ್ನು ದುರ್ಬಲಗೊಳಿಸುವಲ್ಲಿ ಬಳಸುತ್ತಿದೆ. ಇದೊಂದು ಯೋಜಿತ ಪಿತೂರಿʼ ಎಂದು ಕಿಡಿಕಾರಿದ್ದಾರೆ.
ಅವರು(ಹೇಮಂತ್ ಸೋರೆನ್) ನನ್ನ ಆತ್ಮೀಯ ಸ್ನೇಹಿತರಾಗಿದ್ದಾರೆ ಮತ್ತು ಈ ಕಷ್ಟದ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಮರ್ಪಿತವಾಗಿ ಅವರ ಪಕ್ಕದಲ್ಲಿ ನಿಲ್ಲಲು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದರು.
ಜಾರ್ಖಂಡ್‌ನ ಚೇತರಿಸಿಕೊಳ್ಳುವ ಜನರು ಪ್ರತಿಧ್ವನಿಸುವ ಪ್ರತಿಕ್ರಿಯೆಯನ್ನು ನೀಡುತ್ತಾರೆ ಮತ್ತು ಈ ನಿರ್ಣಾಯಕ ಯುದ್ಧದಲ್ಲಿ ವಿಜಯಶಾಲಿಯಾಗುತ್ತಾರೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.