Tuesday, September 17, 2024

ಕಾಂತಾರ-1 ಸಿನಿಮಾಗೆ ಮಲಯಾಳಂ ನಟ ಎಂಟ್ರಿ : ಹೇಗೆ ನಡೀತಾ ಇದೆ ಶೂಟಿಂಗ್..?

Most read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಸಿನಿಮಾ ವಿಶ್ವದಾದ್ಯಂತ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಕಾಂತಾರ 1 ಪ್ರೀಕ್ವೆಲ್ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಲಾಗಿದೆ. ಸದ್ಯ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾಗೆ ಮಲಯಾಳಂ ನಟ ಜಯರಾಂ ಎಂಟ್ರಿಯಾಗಿದೆ ಎನ್ನಲಾಗಿದೆ.

ಕಾಂತಾರ1 ಸಿನಿಮಾ ಕಾಡುಬೆಟ್ಟು ಶಿವನ ಹಿಂದಿನ ತಲೆಮಾರಿನ ಕಥೆಯಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾಗೆ ದೊಡ್ಡ ಸೆಟ್ ಅನ್ನೇ ನಿರ್ಮಾಣ ಮಾಡಲಾಗಿದೆ. 600 ಕ್ಕೂ ಅಧಿಕ ಕಾರ್ಪೆಂಟರ್ ಗಳು, ಸಹಾಯಕರಿಂದ ಈ ಸೆಟ್ ನಿರ್ಮಾಣ ಮಾಡಲಾಗಿದೆ. ಈ ಸೆಟ್ ನಿರ್ಮಾಣ ಮಾಡುವುದಕ್ಕೇನೆ ಮುಂಬೈ, ಹೈದ್ರಬಾದ್ ನಿಂದ ಕಾರ್ಮಿಕರು ಬಂದಿದ್ದಾರೆ. ಈಗಾಗಲೇ ರಿಷಭ್ ಶೆಟ್ಟಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕಾಂತಾರ ಆರಂಭದಲ್ಲಿ ಬರೀ 16 ಕೋಟಿಯಲ್ಲಿ‌ನಿರ್ಮಾಣವಾಗಿದ್ದ ಸಿನಿಮಾ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ ಅದರ ಕ್ರೇಜ್ ನೋಡಿದ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ, ವಿಶ್ವದಾದ್ಯಂತ ಎಲ್ಲಾ ಭಾಷೆಯಲ್ಲೂ ರಿಲೀಸ್ ಮಾಡಿದರು. 400 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದಲ್ಲದೆ ವಿಶ್ವದಾದ್ಯಂತ ಹೆಸರು ಮಾಡಿತ್ತು. ಈಗ ಪ್ರೀಕ್ವೆಲ್ ಮಾಡುವುದಕ್ಕೂ ಅದೇ ಸ್ಪೂರ್ತಿ. ಈಗ ಕಾಂತಾರ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಮಲಯಾಳಂ ನಟ ಜಯರಾಂ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ನಟ ಜಯರಾಂ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ನಲ್ಲಿಯೂ ಅಭಿನಯಿಸಿದ್ದಾರೆ.

More articles

Latest article