Thursday, December 12, 2024

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಮಧ್ಯೆ ಬ್ರೇಕಪ್ ಆಗೋಯ್ತಾ..?

Most read

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಬಾಲಿವುಡ್ ಸ್ಪೆಷಲ್ ಕಪಲ್. ಮಲೈಕಾಗೆ 50 ಆದ್ರೂ ಇನ್ನು ಯಂಗ್ ಆಗಿನೇ ಕಾಣ್ತಾರೆ. ಹಾಗೇ ಅರ್ಜುನ್ ಕಪೂರ್ ಗಿಂತ 12 ವರ್ಷ ದೊಡ್ಡವರು. ಆದರೂ ಇಬ್ಬರ ನಡುವಿನ ಪ್ರೀತಿ ಮಾತ್ರ ಬಹಳ ಚೆನ್ನಾಗಿದೆ. ಎಲ್ಲಾ‌ಕಡೆ ಧೈರ್ಯವಾಗಿ ತನ್ನ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಅಂತ ಹೇಳಿಕೊಂಡು ಓಡಾಡುತ್ತಾರೆ. ಇದೀಗ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸ್ಟೋರಿ ಓಡಾಡುತ್ತಿದೆ.

ವಯಸ್ಸಲ್ಲಿ ಬಾರೀ ಅಂತರವಿದ್ದರು, ಇಬ್ಬರು ಪರಸ್ಪರ ಡೇಟಿಂಗ್ ಮಾಡ್ತಾ ಇದ್ದರು. ಮಲೈಕಾಗೆ ಒಬ್ಬ ಮಗ ಕೂಡ ಇದ್ದಾನೆ. ಈ ಮೊದಲು ಮಲೈಕಾ, ಸಲ್ಮಾನ್ ಖಾನ್ ಸಹೋದರ ಅರ್ಬಜಾನ್ ಖಾನ್ ಅವರನ್ನು ಮದುವೆಯಾಗಿದ್ದರು. ಆದರೆ ಅರ್ಜುನ್ ಕಪೂರ್ ಮೇಲಿನ ಪ್ರೀತಿಯಿಂದ ಗಂಡನನ್ನು ಬಿಟ್ಟಿದ್ದರು. ಮಗನಿಗಾಗಿ ಆಗಾಗ ಅರ್ಬಜಾನ್ ಹಾಗೂ ಮಲೈಕಾ ಒಟ್ಟಾಗಿ ಭೇಟಿಯಾಗುತ್ತಾರೆ. ಇದೀಗ ಅರ್ಜುನ್ ಕಪೂರ್ ಹಾಗೂ ಮಲೈಕಾ ಕೂಡ ದೂರವಾಗಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಇಬ್ಬರು ಪರಸ್ಪರ ಒಪ್ಪಿಯೇ ದೂರವಾಗುತ್ತಿದ್ದಾರೆಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

ಅರ್ಜುನ್ ಕಪೂರ್ ಹಾಗೂ ಮಲೈಕಾ ಆರು ವರ್ಷಗಳಿಂದಾನೂ ಡೇಟಿಂಗ್ ನಲ್ಲಿದ್ದರು. ರೆಸ್ಟೊರೆಂಟ್ ಗಳಲ್ಲೆಲ್ಲಾ ಕೈ ಕೈ ಹಿಡಿದು ಓಡಾಡಿಕೊಂಡಿದ್ದರು. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಸಂಬಂಧ ತುಂಬಾನೇ ವಿಶೇಷವಾಗಿತ್ತು. ಇಬ್ಬರೂ ತಮ್ಮ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಇಬ್ಬರೂ ಬೇರೆಯಾಗುವುದಕ್ಕೆ ನಿರ್ಧರಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಮೌನವಾಗಿರಲು ನಿರ್ಧರಿಸಿದ್ದಾರೆ. ಈ ವಿಷಯನ್ನು ಎಳೆದು ದೊಡ್ಡದು ಮಾಡುವುದಕ್ಕೆ ಇಬ್ಬರೂ ಬಿಡುವುದಿಲ್ಲ ಎಂದು ಹಿಂದಿ ವೆಬ್ಸೈಟ್ ವರದಿ ಮಾಡಿದೆ.

More articles

Latest article