ಒಮ್ಮೊಮ್ಮೆ ದೇವಸ್ಥಾನದಲ್ಲಿ ಪ್ರಸಾದ ತಿಂದಾಗ ಆ ರುಚಿ ನಾಲಿಗೆ ಮೇಲೆ ಹಾಗೆ ಇರುತ್ತದೆ. ಮತ್ತೆ ಅದೇ ಸಾಂಬಾರ್ ಬೇಕು ಅಂತ ಎಷ್ಟೋ ಜನಕ್ಕೆ ಅನ್ನಿಸಿರುತ್ತೆ. ಆದರೆ ಆ ರುಚಿ ಮತ್ತೆ ಸಿಗಲ್ಲ. ಹಾಗಾದ್ರೆ ದೇವಸ್ಥಾನದಲ್ಲಿ ಮಾಡುವ ಸಾಂಬಾರ್ ಮಾಡುವುದು ಹೇಗೆ ಗೊತ್ತಾ..? ಇದಕ್ಕೆ ಈರುಳ್ಳಿ ಬೆಳ್ಳುಳ್ಳಿ ಬೇಡ ಗುರು.
ಬೇಕಾಗುವ ಪದಾರ್ಥಗಳು:
ಕಡಲೇಬೇಳೆ
ಉದ್ದಿನಬೇಳೆ
ಬ್ಯಾಡಗಿ ಮೆಣಸಿನಕಾಯಿ
ಜೀರಿಗೆ
ತೆಂಗಿನ ತುರಿ
ಅರಿಶಿನ
ಸಾಸಿವೆ
ಬೂದು ಗುಂಬಳ
ಎಣ್ಣೆ
ಮಾಡುವ ವಿಧಾನ: ಮಸಾಲೆ ಉರಿದುಕೊಳ್ಳುವುದಕ್ಕೆ ಮೊದಲಿಗೆ ಎರಡು ಸ್ಪೂನ್ ಎಣ್ಣೆ ಹಾಕಿ. ಅದಕ್ಕೆ ಕಡ್ಲೆಬೇಳೆ, ಎರಡು ಟೇಬಲ್ ಸ್ಪೂನ್ ಉದ್ದಿನ ಬೇಳೆ ಸ್ವಲ್ಪ ಉರಿದುಕೊಳ್ಳಿ. ಅದಕ್ಕೆ ಸ್ವಲ್ಪ ಕರಿಬೇವು ಹಾಕಿ. ಹತ್ತರಿಂದ ಹನ್ನೆರಡು ಬ್ಯಾಡಗಿ ಮೆಣಸಿನಕಾಯಿ ಹಾಕಿ ಉರಿದುಕೊಳ್ಳಿ. ಫ್ರೈ ಆದ ಮೇಲೆ ಅದಕ್ಕೆ ಎರಡು ಟೇಬಲ್ ಸ್ಪೂನ್ ಜೀರಿಗೆ ಹಾಕಿ. ಅರ್ಧ ತುರಿದ ಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಳಿಕ ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಅರಿಶಿನ, ಸಾಸಿವೆ, ಸ್ವಲ್ಪ ಬೆಲ್ಲ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಬಳಿಕ ಒಂದು ಪಾತ್ರೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಮೆಣಸಿನಕಾಯಿ, ಎರಡು ಟಮೋಟೋ ಹಾಕಿ ಬಾಡಿಸಿ, ಅಚ್ಚಿದ ಬೂದು ಕುಂಬಳಕಾಯಿ ಹಾಕಿ ಫ್ರೈ ಮಾಡಿ. ತರಕಾರಿ ಬೇಯುವಷ್ಟು ನೀರು ಹಾಕಿ ಸ್ವಲ್ಪ ಕುದಿಸಿ. ನಿಮಗೆ ಕುಂಬಳ ಬೇಡ ಅಂದ್ರೆ ಬದನೆ, ಸೌತೆ ಎಲ್ಲಾ ಹಾಕಬಹುದು. ಸ್ವಲ್ಪ ಅರಿಶಿನ ಹಾಕಿದರೆ ಬೇಗ ಬೇಯುತ್ತದೆ. ಬಳಿಕ ರುಬ್ಬಿದ ಮಸಾಲೆಯನ್ನು ಅದಕ್ಕೆ ಸೇರಿಸಿ. ನಿಮಗೆ ಎಷ್ಟು ಪ್ರಮಾಣದಲ್ಲಿ ಸಾಂಬಾರ್ ಬೇಕು ಅಷ್ಟನ್ನ ನೀರು ಹಾಕಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಮೇಲೊಂದಿಷ್ಟು ಕೊತ್ತಂಬರಿ ಸೊಪ್ಪು ಹಾಕಿ.