ದಾವಣಗೆರೆ: ಫುಡ್ ಕೋರ್ಟ್ ನಲ್ಲಿ ಸಾರ್ವಜನಿಕರಿಗೆ ನೀಡುವ ಆಹಾರ ಸಂಪೂರ್ಣ ಉತ್ತಮ ಗುಣಮಟ್ಟವಾಗಿರಬೇಕು, ಶುದ್ದತೆಯ ಜತೆ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕೆಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ನಗರದ ಡಾ.ಎಂ.ಸಿ.ಮೋದಿ ವೃತ್ತದ ಬಳಿ ನೂತನವಾಗಿ ನಿರ್ಮಿಸಿದ ಸವಿ ಭೋಜನ (Food Court) ಕರ್ನಾಟಕ ರಕ್ಷಣಾ ವೇದಿಕೆಯ ಪಾದಚಾರಿ ವ್ಯಾಪಾರಿಗಳು, ನಗರ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಫುಡ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗಷ್ಟೇ ಫುಡ್ ಕೋರ್ಟಿಗೆ ಮತ್ತು ಸಿಸಿ ರಸ್ತೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ಗುದ್ದಲಿ ಪೂಜೆ ಮಾಡಿದ್ದರು ಈಗ ನಾನು ಪುಟ್ ಕೋರ್ಟ್ ಉದ್ಘಾಟನೆ ಮಾಡುತ್ತಿರುವುದು ಸಂತೋಷದ ವಿಚಾರ. ಬಡವರ ಪರವಾಗಿ ನಮ್ಮ ಸರ್ಕಾರ ಇದೆ. ಇದಕ್ಕೆ ಸಾಕ್ಷಿ ಅಂತಾ ಈಗ ನಡೆಯುತ್ತಿರುವ ಕಾರ್ಯಗಳು ಎಂದರು.
ಈ ಜಾಗದಲ್ಲಿ ಇನ್ನೂ ಅನೇಕ ಮೂಲಭೂತ ಸೌಕರ್ಯಗಳು ಆಗಬೇಕಾಗಿದೆ. ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಮಳೆ ಬಂದರೆ ಮಳೆ ನೀರು ಬಾರದಂತೆ ಫುಡ್ ಕೋರ್ಟಿಗೆ ಶೆಲ್ಡರ್ ಹೊದಿಕೆ ಮಾಡಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು ಇದಲ್ಲದೇ ಗುತ್ತಿಗೆದಾರನಿಗೆ ಉತ್ತಮವಾದ ಕೆಲಸ ಮಾಡಬೇಕು ಆದರೆ ನಾನು ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದರು.
ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಈಗಾಗಲೇ ಫುಡ್ ಕೋರ್ಟ್ ಮಾಡಲು ಎಲ್ಲ ರೀತಿಯ ಟೆಂಡರ್ ಕರೆದು ಹಣ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರು ತಕ್ಷಣ ಎಲ್ಲಾ ಕೆಲಸಗಳನ್ನು ಮುಗಿಸಬೇಕು. ನಗರದಲ್ಲಿ ಒಟ್ಟು ನಾಲ್ಕು ಭಾಗದಲ್ಲಿ ಡಾ.ಎಂ.ಸಿ. ಮೋದಿ ವೃತ್ತ, ಎಸ್ ಓ ಜಿ ಕಾಲೋನಿ, ಜಯದೇವ ವೃತ್ತ ಈ ಭಾಗಗಳಲ್ಲಿ 80ರಷ್ಟು ಕೆಲಸ ಕಾರ್ಯ ಮುಗಿದಿದೆ. ಗಡಿಯಾರ ಕಂಬ ಹತ್ತಿರ ಕೆಲಸ ಪ್ರಾರಂಭ ಮಾಡಬೇಕಾಗಿದೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಗಡಿಗುಡಾಳು ಮಂಜುನಾಥ್ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆಶಯದಂತೆ ಈ ಪುಡ್ ಕೋರ್ಟ್ ಗಳು ನಿರ್ಮಾಣವಾಗುತ್ತಿವೆ. ಅದರಂತೆ ನಮ್ಮ ಭಾಗದಲ್ಲಿ ಸಚಿವರು ವಿಶೇಷ ಕಾಳಜಿ ವಹಿಸಿದ್ದು, ಈ ಕಾರ್ಯ ಮಾಡಲು ನನಗೆ ಹೆಮ್ಮೆ ಎನ್ನಿಸುತ್ತದೆ. ಒಳ್ಳೆಯ ಕಾರ್ಯ ಮಾಡಿದಾಗ ಸಾರ್ವಜನಿಕರು ಪ್ರಶಂಸೆ ನೀಡಬೇಕು. ಭಾಗದ ವಾರ್ಡಿನಲ್ಲಿ ಅಭಿವೃದ್ಧಿ ಕೆಲಸ ಸರಾಗವಾಗಿ ನಡೆಯುತ್ತಿದೆ ಮುಂದೆ ಸಾರ್ವಜನಿಕರು ಪ್ರೋತ್ಸಾಹ ನೀಡಿದರೆ ಇನ್ನೂ ಹೆಚ್ಚಿನದಾಗಿ ಕೆಲಸ ನಿರ್ವಹಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಫುಡ್ ಕೋರ್ಟಿನ ಉಳಿದ ಎಲ್ಲಾ ಕೆಲಸಗಳು ಅತಿ ಶೀಘ್ರದಲ್ಲಿ ಪೂರೈಸುವುದಾಗಿ ತಿಳಿಸಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಪಾಮೇನಹಳ್ಳಿ ನಾಗರಾಜ್, ಉಮೇಶ್, ಚಾಮನ್ ಸಾಬ್, ಎ.ನಾಗರಾಜ್ ಮಾತನಾಡಿದರು. ಪ್ರಾಸ್ತಾವಿಕವಾಗಿ ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ವಹಿಸಿದ್ದರು. ಈ ಸಂದರ್ಭದಲ್ಲಿ ಪಾದಾಚಾರಿ ವ್ಯಾಪಾರಿಗಳ ಘಟಕದ ಅಧ್ಯಕ್ಷ ಸುರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಶಾಂತಮ್ಮ, ನಾಗಮ್ಮ, ಮಂಜುಳ ಗಣೇಶ್, ಉದ್ಯಮೆದಾರರ ಘಟಕ ಉಪಾಧ್ಯಕ್ಷ ಓ.ಮಹೇಶ್ವರಪ್ಪ, ಬಿ.ಎಸ್.ಸಂತೋಷ್, ರಾಜಣ್ಣ, ರವಿಕುಮಾರ್, ಜಬಿವುಲ್ಲಾ, ಆಟೋ ರಫೀಕ್, ಆಯುಬ್, ಅನ್ವರ್, ದಾದಾಪೀರ್, ಎಂ.ಡಿ.ರಫೀಕ್, ದಾದೇಶ್, ಧೀರೇಂದ್ರ, ರಾಘವೇಂದ್ರ, ಚಂದ್ರು, ತುಳಸಿರಾಮ್, ಸಂಜು, ಕರಿಬಸಪ್ಪ, ರಮೇಶ್, ರಾಕಿ, ಅಕ್ಷಯ್, ಹನುಮಂತಪ್ಪ, ಬಸವರಾಜ್, ದಾದಾಪೀರ್, ನಾಗರಾಜ್, ರವಿ, ಕಾಲುಲಾಲ್ ಚೌದ್ರಿ, ಮಂಜುನಾಥ್, ನಾಗಪ್ಪ ಇತರರು ಇದ್ದರು.