“ಲವ್ ಮ್ಯಾಟ್ರು” ತೆರೆಗೆ ಬರಲು ಸಿದ್ಧ; ಏನೂ ಗೊತ್ತಿಲ್ಲ ಎಂದೇ ಎಲ್ಲವನ್ನೂ ಹೇಳಿದ್ದಾರೆ ನಟ ನಿರ್ದೆಶಕ ವಿರಾಟ ಬಿಲ್ವ

Most read

ಎಲ್ಲ ಸಿನಿಮಾಗಳ ಹೂರಣ ಲವ್‌ ಆದರೂ ಒಂದೊಂದು ಸಿನಿಮಾದ ಪ್ರೇಮ ಕಥೆ ವಿಭಿನ್ನವಾಗಿರುತ್ತದೆ. ಪ್ರೀತಿ ಪ್ರೇಮದ ಕಥೆಯ ಹಂದರವುಳ್ಳ ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅದೇ “ಲವ್ ಮ್ಯಾಟ್ರು”. ಹೆಸರೇ ಹೇಳುವಂತೆ ಲವ್‌ ಕುರಿತಾದ ಮ್ಯಾಟರ್‌ ವುಳ್ಳ ಸಿನಿಮಾ. ಇದು ಎಲ್ಲ ಸಿನಿಮಾಗಳಂತೆ ಅಲ್ಲ. ತುಂಆ ಡಿಂಫರೆಂಟ್‌ ಆದ ಲವ್‌ ಸುತ್ತ ತಿರುಗುವ ಸಿನಿಮಾ ಇದು. ಆರಂಭದಿಂದ ಅಂತ್ಯದವರೆಗೂ  ಕುತೂಹಲ ಕಾಯ್ದುಕೊಂಡಿದ್ದು, ಕುರ್ಚಿಯ ತುದಿಗಾಲಲ್ಲಿ ನಿಮ್ಮನ್ನು ಕೂರಿಸುತ್ತಿದೆ.

ಲವ್ ಸಬ್ಜೆಕ್ಟ್ ಇರುವಂತಹ ಸಿನಿಮಾಗಳು ಯಾರಿಗೆ ತಾನೆ ಇಷ್ಟವಾಗಲ್ಲ?. ಸಹಜವಾಗಿಯೇ ಎಲ್ಲರಿಗೂ ಇಷ್ಟವಾಗುತ್ತವೆ. ಯಾಕಂದ್ರೆ ಅಲ್ಲೊಂದು ಮಧುರ ಪ್ರೇಮವಿರುತ್ತದೆ, ಸುಂದರ ಪ್ರೇಮಗೀತೆ ಇರುತ್ತದೆ. ಹೀಗಾಗಿ ಎಲ್ಲಾ ವರ್ಗದವರಿಗೂ ಈ ರೀತಿಯ ಸಿನಿಮಾಗಳು ಇಷ್ಟವಾಗುತ್ತವೆ. ಇಷ್ಟೆಲ್ಲ ಹೇಳೋದಕ್ಕೆ ಕಾರಣ ಲವ್ ಮ್ಯಾಟ್ರು ಸಿನಿಮಾ.

ಹೆಸರು ಕೇಳಿದರೇನೆ ಇದೊಂದು ಲವ್ ಕಂಟೆಂಟ್ ಇರುವ ಸಿನಿಮಾ ಎಂದು ಸುಲಭವಾಗಿ ಊಹಿಸಿಬಹುದು. ಲವ್ ಮ್ಯಾಟ್ರು ಸಿನಿಮಾದಲ್ಲಿ ಬೇಜಾನ್ ಲವ್ ಮ್ಯಾಟ್ರು ಇರುತ್ತದೆ ಅನ್ನುವುದು ಸುಳ್ಳಲ್ಲ. ಈಗ ಹಾಡುಗಳು ರಿಲೀಸ್ ಆಗಿದ್ದು, ಕೇಳುಗರಿಗೆ ಖುಷಿ ಕೊಡುತ್ತಿವೆ. ಅದರಲ್ಲೂ ಲವ್ ಮಾಡೋರಿಗೆ ಮನಸ್ಸು ತೇಲುವಂತೆ ಮಾಡುತ್ತವೆ. ಏನೋ ಗೊತ್ತಿಲ್ಲ ಎಂಬ ಹಾಡಂತೂ ಅದ್ಭುತವಾಗಿ ಮೂಡಿ ಬಂದಿದೆ. ಲವ್‌ ಉಸಾಬರಿ ಬೇಡಪ್ಪ ಎಂದು ಅಂದುಕೊಂಡಿದ್ದವರನ್ನೂ ಲವ್‌ ಗೆ ಎಳೆಯುವುದರಲ್ಲಿ ಸಕ್ಸಸ್‌ ಆಗುತ್ತದೆ.  ಈ ಹಾಡಿಗೆ ನಾಯಕ ನಟ ವಿರಾಟ ಬಿಲ್ವ ಹಾಗೂ ನಾಯಕಿ ಸೋನಲ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಸೋನಲ್ ತುಂಬಾ ಕ್ಯೂಟ್ ಆಗಿ ಕಾಣಿಸ್ತಾ ಇದ್ದಾರೆ. ಶೇಡ್ರಾಕ್ ಸೋಲೋಮನ್ ಸಂಗೀತದಲ್ಲಿ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ.

“ಲವ್ ಮ್ಯಾಟ್ರು” ಸಿನಿಮಾಗೆ ವಿರಾಟ ಬಿಲ್ವ ಅವರೇ ನಿರ್ದೇಶನ ಮಾಡಿದ್ದಾರೆ. ಸುಕ್ಕಾ ಸೂರಿ, ಪ್ರಶಾಂತ್ ನೀಲ್, ಕೆ ಎಂ ಚೈತನ್ಯ ಅವರ ಸಿನಿಮಾಗಳಿಂದ ಸ್ಪೂರ್ತಿ ಪಡೆದಿರುವ ಇವರು ಏಕಲವ್ಯನಂತೆ ಅವರಿಂದ ಕಲಿತಿದ್ದಾರೆ.  ತಮ್ಮ ವಿರಾಟ್ ಗುರುಗಳು‌ ಎಂದೇ ಭಾವಿಸಿದ್ದಾರೆ. ಕಡ್ಡಿಪುಡಿಯಲ್ಲೂ ನಟನೆ ಮಾಡಿದ್ದ ವಿರಾಟ್‌ ಈ ಸಿನಿಮಾ ಮೂಲಕ ನಟನೆ ಹಾಗೂ ನಿರ್ದೇಶನ ಎರಡರ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ವಂದನ ಪ್ರಿಯ ವಿ ರವರ ಸಿಲ್ವರಿಥಮ್ PRODUCTION ಮತ್ತು INK ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಿರುವ “ಲವ್ ಮ್ಯಾಟ್ರು” ಎಲ್ಲರ ಶ್ರಮದಿಂದ ರಿಲೀಸ್ ಗೆ ರೆಡಿಯಾಗಿದೆ. ಸುಶ್ಮಿತಾ ಗೋಪಿನಾಥ್,  ಅಚ್ಯುತ್‌ ಕುಮಾರ್, ಸುಮನ್ ರಂಗನಾಥ್, ಅನಿತಾ ಭಟ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ‌. ಶೇಡ್ರಾಕ್ ಸೋಲೋಮನ್ – ಸಂಗೀತ, ದೇವೇಂದ್ರ ಆರ್ ನಾಯ್ಡು ಮತ್ತು ಪರಮೇಶ್ ಸಿ ಎಂ – ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನವಿದೆ. ಎಲ್ಲಾ ಅಂದುಕೊಂಡಂತೆ ರೆಡಿಯಾಗಿದ್ದು, ತೆರೆಮೇಲೆ ಶೀಘ್ರದಲ್ಲಿಯೇ ಬರಲಿದೆ.

More articles

Latest article