ಲೋಕಸಭೆಯ ಸ್ಪೀಕರ್ಹುದ್ದೆಗೆ ಸ್ಥಾನಕ್ಕೆ ಇಂದು (ಬುಧವಾರ) ಸಂಸತ್ತಿನಲ್ಲಿ ಚುನಾವಣೆ ನಡೆಯುತ್ತಿದೆ. ಇಂಡಿಯಾ ಮೈತ್ರಿಕೂಟದ ತೃಣಮೂಲ ಕಾಂಗ್ರೆಸ್ ಪಕ್ಷವು ಇನ್ನೂ ತನ್ನ ನಿರ್ಧಾರವನ್ನು ತಿಳಿಸದ ಕಾರಣ ಕುತೂಹಲ ಹಾಗೆಯೇ ಇರಿಸಿಕೊಂಡಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಕೇಂದ್ರದಲ್ಲಿ ಗದ್ದುಗೆ ಹಿಡಿದಿದ್ದು, ಸಂಸದ ಓಂ ಬಿರ್ಲಾ ಅವರನ್ನು ಸತತ ಎರಡನೇ ಅವಧಿಗೆ ಸ್ಪೀಕರ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದರೆ.
ನಿನ್ನೆ ಎನ್ ಡಿ ಎ ಅಭ್ಯರ್ಥಿಗೆ ಬೆಂಬಲ ನೀಡುವಂತೆ ರಾಜನಾಥ್ ಸಿಂಗ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮನವಿ ಮಾಡಿದ್ದಾರೆ. ಆದರೆ ಉಪಸಭಾಪತಿ ಹುದ್ದೆಯನ್ನು ಪ್ರತಿಪಕ್ಷಗಳಿ ನೀಡುವುದಾದರೆ ಓಂ ಬಿರ್ಲಾ ಅವರಿಗೆ ಬೆಂಬಲ ನೀಡುತ್ತೇವೆ ಎಂಬ ಮಾತನ್ನು ಆಡಿದ್ದಾರೆ. ಆದರೆ ಎರಡೂ ಪಕ್ಷಗಳ ನಡುವಿನ ಮಾತುಕತೆ ವಿಫಲವಾಗಿದೆ
ನಂತರ ಪ್ರತಿಪಕ್ಷಗಳು ಕೇರಳದಿಂದ ಎಂಟು ಬಾರಿ ಸಂಸದರಾಗಿರುವ ಕೋಡಿಕುನ್ನಿಲ್ ಸುರೇಶ್ ಅವರನ್ನು ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡುವ ಮೂಲಕ ಒಮ್ಮತಕ್ಕೆ ತಲುಪಲು ವಿಫಲವಾಗಿ ಚುನಾವಣೆ ನಡೆಯುತ್ತಿದೆ.
ಸ್ವಾತಂತ್ರ್ಯ ನಂತರದಲ್ಲಿ 1976 ರಲ್ಲಿ ಲೋಕಸಭೆಯ ಸಭಾಪತಿ ಸ್ಥಾನಕ್ಕೆ ಕೊನೆಯ ಬಾರಿಗೆ ಚುನಾವಣೆ ನಡೆದಿತ್ತು. ವಿರೋಧ ಪಕ್ಷಗಳಿಗೆ ಉಪಸಭಾಪತಿ ಹುದ್ದೆಯನ್ನು ನೀಡಬೇಕು ಎಂಬ ಇಂಡಿಯಾ ಮೈತ್ರಿಕೂಟದ ಬೇಡಿಕೆಯನ್ನು ಒಪ್ಪಿಕೊಳ್ಳಲು ಬಿಜೆಪಿಯ ನಾಯಕರು ನಿರಾಕರಿಸಿದ ನಂತರ ಇಂಡಿಯಾ ಬಣವು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧೆ ನಡೆಸಲು ಕೊನೆಯ ಕ್ಷಣದ ನಿರ್ಧಾರವನ್ನು ತೆಗೆದುಕೊಂಡಿತು.