ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಬ್ರದರ್ ಅವರ ರಾಜಕೀಯ ಹಿಡಿತವನ್ನು ಸಡಿಲಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ದೊಡ್ಡ ಪ್ಲಾನ್ ಮಾಡುತ್ತಿದ್ದೆ. ಅದರಂತೆ ಬೆಂಗಳೂರು ಗ್ರಾಮಾಂತರದಿಂದ ಡಿಕೆ ಸುರೇಶ್ ಎದುರು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ಮುಖ್ಯಸ್ಥರು ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್ ಈಗಾಗಲೇ ಪರಿಚಿತ ವ್ಯಕ್ತಿತ್ವವಾಗಿದ್ದು, ಇತ್ತೀಚಿಗಷ್ಟೇ ಜಯದೇವ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ನಿವೃತ್ತಿ ಹೊಂದಿದ್ದಾರೆ.
ಲೋಕಸಭಾ ಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ಸ್ಪರ್ಧೆಗೆ ಹಿಂದೇಟು ಹಾಕಿತ್ತಿರುವ ಹಿನ್ನಲೆ, ಡಾ.ಮಂಜುನಾಥ್ ರನ್ನ ಕಣಕ್ಕಿಳಿಸಲು ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಡಾ ಮಂಜುನಾಥ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಬಿಟ್ಟರೆ ಹೆಚ್ಚು ಜೆಡಿಎಸ್ಗೆ ಮನ್ನಣೆ ಆದರೆ ಈಭಾರಿ ಬಿಜೆಪಿ ಚಿಹ್ನೆಯಿಂದ ಮಂಜುನಾಥ್ ಅವರು ಸ್ಪರ್ಧಿಸಿದ್ರೆ ಹೆಚ್ಚಿನ ಲಾಭ ಎಂದು ಅಂದಾಜಿಸಿದ್ದಾರೆ.
ದ್ಯ ಡಿ.ಕೆ.ಸುರೇಶ್ ರಾಜ್ಯದ ಏಕೈಕ ಕಾಂಗ್ರೆಸ್ ಸಂಸದರಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಡಾ ಮಂಜುನಾಥ್ ಸ್ಪರ್ಧಿಸಿದರೆ ಸಂಸದ ಡಿಕೆ ಸುರೇಶ್‌ಗೆ ಗೆಲುವಿನ ಅಂತರ ಕಡಿಮೆಯಾಗಬಹುದು ಆದರೆ ಒಳ್ಳೆ ಫೈಟ್ ಏರ್ಪಡೋದು ಗ್ಯಾರಂಟಿ.