ಪೊಲೀಸರು ವಿನಮ್ರ, ಪ್ರಾಮಾಣಿಕ, ಸೇವಾ ಮನೋಭಾವದವರಾಗಿ ಅಮಾಯಕರನ್ನು ರಕ್ಷಿಸಬೇಕು. ಆದರೆ ದುರದೃಷ್ಟವಶಾತ್, ಭ್ರಷ್ಟಾಚಾರದಿಂದಾಗಿ ಪೊಲೀಸ್ ಠಾಣೆಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದನ್ನು ನಿಲ್ಲಿಸದಿದ್ದರೆ, ಇದು ಖಂಡಿತವಾಗಿಯೂ ಸವಾಲಾಗಿ ಪರಿಣಮಿಸುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಎಂದು ಲೋಕಾಯುಕ್ತ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಪಡೆಯುವವರೆಗೆ ಆರೋಪಿತ ದಂಪತಿಯನ್ನು ಬಂಧಿಸದಿರಲು 50,000 ರೂ. ಗಳನ್ನು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟ ಕೆಆರ್ ಪುರಂ ಪೊಲೀಸ್ ಇನ್ಸಪೆಕ್ಟರ್ ವಜ್ರಮುನಿ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಲೋಕಾಯುಕ್ತ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ. ಅದೇ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಮ್ಯಾ ಅವರು ಗರ್ಭಿಣಿ ಮತ್ತು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣಯೊಂದಲ್ಲಿ ಕೆ ಆರ್ ಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಫೆಕ್ಟರ್ ರಮ್ಯಾ ಅವರು ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ನಿರೀಕ್ಷಣಾ ಜಾಮೀನು ಸಿಗುವವರೆಗು ಬಂಧಿಸದಿರಲು ಐದು ಲಕ್ಷ ಡಮ್ಯಾಂಡ್ ಮಾಡಿದ್ದಾರೆ ನಂತರ ಎರಡು ಲಕ್ಷಕ್ಕೆ ಒಪ್ಪಿದ್ದು, ಐವತ್ತು ಸಾವಿನ ಹಣವನ್ನು ಮುಂಗಡವಾಗಿ ಪೊಲೀಸ್ ರಮ್ಯಾ ಅವರಿಗೆ ನೀಡಿದ್ದಾರೆ. ಉಳಿದದನ್ನು ವಜ್ರಮುನಿ ಅವರಿಗೆ ನೀಡಬೇಕಾಗಿತ್ತು. ಆಸಮಯದಲ್ಲಿ ಲೋಕಾಯುಕ್ತ ದಾಳಿಯಾಗಿದ್ದು ಸಿಕ್ಕಿಹಾಕಿಕೊಂಡಿದ್ದಾರೆ.
ವಿವಾರಣೆ ವೇಳೆ, ಪೊಲೀಸ್ ಠಾಣೆಗಳಲ್ಲಿನ ಹೀನಾಯ ಪರಿಸ್ಥಿತಿಯು ಸಾಮಾನ್ಯ ಜನರಿಗೆ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಪೊಲೀಸರು ವಿನಮ್ರ, ಪ್ರಾಮಾಣಿಕ, ಸೇವಾ ಮನೋಭಾವದವರಾಗಿ ಅಮಾಯಕರನ್ನು ರಕ್ಷಿಸಬೇಕು. ಆದರೆ ದುರದೃಷ್ಟವಶಾತ್, ಭ್ರಷ್ಟಾಚಾರದಿಂದಾಗಿ ಪೊಲೀಸ್ ಠಾಣೆಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದನ್ನು ನಿಲ್ಲಿಸದಿದ್ದರೆ, ಇದು ಖಂಡಿತವಾಗಿಯೂ ಸವಾಲಾಗಿ ಪರಿಣಮಿಸುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಅಲ್ಲಿ ಧ್ವನಿಯಿಲ್ಲದ, ಅಸಹಾಯಕ ಮತ್ತು ಬಡ ಪೊಲೀಸ್ ಸಿಬ್ಬಂದಿ ಅಧಿಕಾರಿಗಳಿಗೆ ಬಲಿಪಶುಗಳಾಗುವ ಸಾಧ್ಯತೆಯಿದೆ ಎಂದು ಲೋಕಾಯುಕ್ತ ನ್ಯಾಯಾಲಯ ಹೇಳಿದೆ.