ಕೋಲಾರ: ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮತ್ತು ಸರ್ವೇ ಸೂಪರ್ ವೈಸರ್ ಸುರೇಶ್ ಬಾಬು ಅವರ ನಿವಾಸದ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಧನಂಜಯ ನೇತೃತ್ವದ ಲೋಕಾಯುಕ್ತ ತಂಡ ಸುರೇಶ್ ಬಾಬು ಅವರಿಗೆ ಸೇರಿದ ಕೋಲಾರದ ಹಾರೋಹಳ್ಳಿ, ಧರ್ಮರಾಯನಗರ, ಕೋಟೆ ಮತ್ತು ಮಾಲೂರು ಸಂತೆಹಳ್ಳಿ ಹಾಗೂ ಹೊಸಕೋಟೆಯ ಗೆಸ್ಟ್ ಹೌಸ್ ಮೇಲೆ ದಾಳಿ ನಡೆಸಿದ್ದಾರೆ. ಅವರ ಆದಾಯ ಮೂಲಗಳನ್ನು ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ನಾಲ್ಕು ತಿಂಗಳ ಹಿಂದೆಯೂ ಲೋಕಾಯುಕ್ತ ಅಧಿಕಾರಿಗಳು ಸುರೇಶ್ ಬಾಬು ಮನೆ ಮೇಲೆ ದಾಳಿ ನಡೆಸಿ ಇಲಾಖೆಯ ದಾಖಲೆಗಳೂ ಸೇರಿದಂತೆ ಒಂದಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.