ಸಾಹಿತಿ ಡಾ. ಕಮಲಾ ಹಂಪನಾ ಇನ್ನಿಲ್ಲ: ನಿದ್ರೆಯಲ್ಲೇ ಕಣ್ಮುಚ್ಚಿದ ಹಿರಿಯ ಜೀವ

ಬೆಂಗಳೂರು: ಕನ್ನಡದ ಹಿರಿಯ ಲೇಖಕಿ ಡಾ. ಕಮಲಾ ಹಂಪನಾ ರಾತ್ರಿ ನಿದ್ದೆಯಲ್ಲಿರುವಾಗಲೇ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ.

89 ವರ್ಷ ವಯಸ್ಸಿನ ಕಮಲಾ ಹಂಪನಾ ತಮ್ಮ ಪತಿ ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ (ಹಂಪನ), ಪುತ್ರಿ ಆರತಿ ಎಚ್.ಎನ್ ಸೇರಿದಂತೆ ಅಪಾರ ಬಂಧುಮಿತ್ರರು, ಅಭಿಮಾನಿ, ಶಿಷ್ಯವರ್ಗವನ್ನು ಬಿಟ್ಟು ಅಗಲಿದ್ದಾರೆ.

ಡಾ. ಕಮಲಾ ಹಂಪನಾ ಅವರ ದೇಹವನ್ನು ಎಂ.ಎಸ್.ರಾಮಯ್ಯ ಕಾಲೇಜಿಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಾಹಿತ್ಯ, ಸಂಸ್ಕೃತಿ, ಸಂಶೋಧನೆಯ ಕ್ಷೇತ್ರಗಳಲ್ಲಿ ಅಪಾರವಾದ ಕೆಲಸ ಮಾಡಿದ್ದ ಕಮಲಾ ಹಂಪನಾ ಅವರಿಗೆ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ನೀಡಲಾಗಿತ್ತು. ಅಪಾರ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಅವರು ಅಪಾರ ಶಿಷ್ಯವರ್ಗವನ್ನು ಹೊಂದಿದ್ದರು.

More articles

Latest article

Most read