ಬೆಂಗಳೂರು: ಎಣ್ಣೆ ಪ್ರಿಯರಿಗೆ ಫುಲ್ ಖುಷ್. ನಾಳೆ ಎಂದಿನಂತೆ ಮದ್ಯ ಮಾರಾಟ ಇರುತ್ತದೆ. ಈ ಹಿಂದೆ ರಾಜ್ಯ ಮದ್ಯ ಮಾರಾಟಗಾರರ ಸಂಘ ನಾಳೆ ನ.೨೦ರಂದು ಮದ್ಯದಂಗಡಿಗಳನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಮದ್ಯ ಮಾರಾಟಗಾರರ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಸರ್ಕಾರ ಭರವಸೆ ನೀಡಿರುವ ಹಿನ್ನಲೆಯಲ್ಲಿ ಮುಷ್ಕರವನ್ನು ಹಿಂಪಡೆದಿರುವುದಾಗಿ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.
ತಾತ್ಕಾಲಿಕವಾಗಿ ಮುಷ್ಕರ ಮುಂದೂಡಿದ್ದೇವೆ. ಸಮಸ್ಯ ಮತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳೇ ಭರವಸೆ ನೀಡಿರುವುದರಿಂದ ನಾಳೆ ಮದ್ಯದ ಅಂಗಡಿಗಳನ್ನು ಬಂದ್ ಮಾಡುವುದಿಲ್ಲ ಒಂದು ವೇಳೆ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಮದ್ಯ ಮಾರಾಟಗಾರರ ಸಂಘ ಎಚ್ಚರಿಎಕ ನೀಡಿದೆ.
ಈ ಹಿಂದೆ ಸಂಘವು ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ಮಿತಿಮೀರಿ ಹೋಗಿದೆ ಎಂದು ಆರೋಪಿಸಿತ್ತು. ಅಧಿಕಾರಿಗಳಿಂದ ಕಿರುಕುಳ ಹೆಚ್ಚುತ್ತಿದೆ. ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಅಧಿಕಾರಿಗಳು ನೇರವಾಗಿ ನಾವು ಲಂಚ ಕೊಟ್ಟು ಬಂದಿದ್ದೇವೆ ಎಂದು ಹೇಳಿ ಹಣ ಕೇಳುತ್ತಾರೆ ಎಂದು ಆರೋಪಿಸಿದ್ದರು.
ಸನ್ನದುದಾರರು ತಡೆದುಕೊಳ್ಳಲು ಸಾದ್ಯವಾಗದಷ್ಟು ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಗೋಪಾಲಯ್ಯ ಸಚಿವರಾಗಿದ್ದಾಗಲೂ ಲಂಚ ಹೆಚ್ಚಾಗಿತ್ತು, ಅದಕ್ಕಿಂತ ಹಿಂದೆ ನಾಗೇಶ್ ಸಚಿವರಾಗಿದ್ದಾಗಲೂ ಹೆಚ್ಚಾಗಿತ್ತು. ಈಗ ಲಂಚಾವತಾರ ಮಿತಿ ಮೀರಿದೆ. ಆದರೆ ಸತೀಶ್ ಜಾರಕಿ ಹೊಳಿ ಸಚಿವರಾಗಿದ್ದಾಗ ಲಂಚ ಇರಲಿಲ್ಲ ಎಂದು ಹೇಳಿದ್ದರು. ಆದ್ದರಿಂದ ನ.20ರಂದು ಮದ್ಯದಂಗಡಿಗಳನ್ನು ಮುಚ್ಚುವ ಮೂಲಕ ಮುಷ್ಕರ ನಡೆಸಲು ತೀರ್ಮಾನಿಸಿದ್ದರು.