ಶಕ್ತಿ(ಛತ್ತೀಸ್‌ಗಢ): ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ವಿದ್ಯುತ್ ಸ್ಥಾವರದಲ್ಲಿ ಮಂಗಳವಾರ ತಡರಾತ್ರಿ ಲಿಫ್ಟ್ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟು, ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ದಬ್ರಾ ಪ್ರದೇಶದ ಉಚ್ಪಿಂಡಾ ಗ್ರಾಮದಲ್ಲಿರುವ ಆರ್‌ಕೆಎಂ ಪವರ್ ಜೆನ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿಈ ದುರಂತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತಾ ಶರ್ಮಾ ತಿಳಿಸಿದ್ದಾರೆ
ತಮ್ಮ ಪಾಳಿ ಮುಗಿಸಿ 10 ಕಾರ್ಮಿಕರು ಲಿಫ್ಟ್ ನಲ್ಲಿ ಇಳಿಯುತ್ತಿದ್ದಾಗ ಲಿಫ್ಟ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪದ ರಾಯ್‌ಗಢದ ಜಿಂದಾಲ್ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಲಿಫ್ಟ್ 2,000 ಕೆಜಿ ಲೋಡ್ ಸಾಮರ್ಥ್ಯ ಹೊಂದಿದ್ದು ಕೆಲವು ದಿನಗಳ ಹಿಂದೆ ನಿರ್ವಹಣೆ ಮಾಡಲಾಗಿತ್ತು ಎನ್ನಲಾಗಿದೆ.