ಪುಲ್ವಾಮಾ ದಾಳಿ ಹೆಸರಲ್ಲಿ ಕಳೆದ ಲೋಕಸಭಾ ಚುನಾವಣೆ : ಸಚಿವ ಸಂತೋಷ ಲಾಡ್

Most read

ಹುಬ್ಬಳ್ಳಿ: ನೆತ್ತಿಯ ಮೇಲೆ ಉರಿಯುವ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿರುವ ಹಾಗೆ ಹುಬ್ಬಳ್ಳಿ ಲೋಕಸಭಾ ಕ್ಷೇತ್ರದಾದ್ಯಂತ ಚುನಾವಣೆ ಪ್ರಚಾರದ ಕಾವು ಏರುತ್ತಲೇ ಇದೆ.

ಕೇಂದ್ರ ಬಿಜೆಪಿ ವಿರುದ್ಧ ರಣಕಹಳೆಯನ್ನೇ ಸಾರಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ನಡೆದದ್ದು ಪುಲ್ವಾಮಾ ದಾಳಿಯ ಹೆಸರಲ್ಲಿ. ಆಗ ಇವರಿಗೆ ವೋಟ್ ಶೇರ್ ಜಾಸ್ತಿ ಆಗಲು ಕಾರಣವೇ ಪುಲ್ವಾಮಾ ದಾಳಿ. ಈಗ ರಾಮ್ ರಹೀಮ್, ಪಾಕಿಸ್ತಾನ, ಅಫಗಾನಿಸ್ತಾನ, ಖಲಿಸ್ತಾನ ಎನ್ನುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಹತ್ತು ವರ್ಷದ ಬಿಜೆಪಿ ಆಡಳಿತದಿಂದ ಯಾವ ಹಿಂದೂ ಕೂಡ ಅನುಕೂಲ ಪಡೆದಿಲ್ಲ. ಬಡವರಿಗೂ ಅನುಕೂಲ ಆಗಿಲ್ಲ. ಹಿಂದೂ ಧರ್ಮದ ಹೆಸರು ಹೇಳಿ ವೋಟ್ ತಗೋತಾರೆ. ಆದರೆ ಆ ಹಿಂದುಗಳ ವಿರುದ್ಧವೇ ಮೋದಿ ಆಡಳಿತ ಕೊಟ್ಟಿದ್ದಾರೆ. ಮೋದಿ ಕಾಲದಲ್ಲಿ ದೇಶ ದಿವಾಳಿ ಎದ್ದು ಹೋಗಿದೆ. ಇದನ್ನು ಪ್ರಶ್ನಿಸುವ ನಮ್ಮ ಪಕ್ಷದ ಅಕೌಂಟ್ ಸೀಜ್ ಮಾಡಿದ್ದಾರೆ ಎಂದು ಸಂತೋಷ್ ಲಾಡ್ ಗುಡುಗಿದ್ದಾರೆ.

ಇದೇ ವೇಳೆ ದಿಂಗಾಲೇಶ್ವರ ಸ್ವಾಮೀಜಿಗಳ ಬಗ್ಗೆ ಮಾತನಾಡಿದ ಸಚಿವ ಲಾಡ್  ಅವರು, “ದಿಂಗಾಲೇಶ್ವರ ಸ್ವಾಮೀಜಿಯವರ ಹೇಳಿಕೆ ಸಾಕಷ್ಟು ಪರಿಣಾಮ ಬೀರಿದೆ. ಇಡೀ ಕರ್ನಾಟಕದಲ್ಲಿ ಸ್ವಾಮೀಜಿಗಳ ಅಭಿಮಾನಿಗಳಿದ್ದಾರೆ. ಅವರು ಜೋಶಿ ಸೋಲಿಸಬೇಕು ಅಂತಾ ಹೇಳ್ತಿದ್ದಾರೆ. ಅದು ನಮಗೆ ಅನುಕೂಲ. ಅವರು ಸ್ಪರ್ಧೆ ಮಾಡಿದ್ರೆ ಏನು ಆಗುತ್ತೆ ಅಂತಾ ಹೇಳೋಕೆ ಆಗಲ್ಲ. ಯಾಕಂದ್ರೆ ಅವರ ಜೊತೆ ಎಲ್ಲಾ  ಸಮುದಾಯದ ಜನರಿದ್ದಾರೆ” ಎಂದು ದಿಂಗಾಲೇಶ್ವರ ಶ್ರೀಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಇಡೀ ದೇಶದಲ್ಲಿ ಒಳ್ಳೆ ವಾತಾವರಣ ಇದೆ. ನಮ್ಮ ವಿನೋದ್ ಅಸೂಟಿ ಮರಿ ಟಗರು. ಏಳನೇ ತಾರೀಕು ನೋಡಿ ಅದು ಹೇಗೆ ಗುದ್ದತ್ತೆ ಎಂದಿದ್ದಾರೆ.

More articles

Latest article