ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ 10 ಗುಂಟೆ ಮೀಸಲಿಡುವಂತೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಭಾರಿ ಅವರು ತಮ್ಮ ಅಳಿಯ ಅನಿರುಧ್ ಜಟ್ಕರ್ ಅವರ ಜತೆ ಆಗಮಿಸಿ ಮನವಿ ಸಲ್ಲಿಸಿದರು.
ವಿಷ್ಣುವರ್ಧನ್ ಹುಟ್ಟು ಹಬ್ಬ ಆಚರಿಸುವ ಸೆಪ್ಟೆಂಬರ್ 17ರ ಒಳಗೆ ಭೂಮಿ ಸಿಕ್ಕರೆ ಹೆಚ್ಚು ಸಂತೋಷವಾಗುತ್ತದೆ. ಅವರಿಗೆ ಗೌರವ ಸಲ್ಲಿಸಲು ಅವಕಾಶ ಇರಬೇಕು ಎನ್ನುವುದು ಅಭಿಮಾನಿಗಳ ಬಯಕೆಯಾಗಿದೆ. ಹಾಗೆಯೇ ವಿಷ್ಣುವರ್ಧನ್ ಅವರಿಗೆ ʼಕರ್ನಾಟಕ ರತ್ನʼ ಕೊಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿರುವುದಾಗಿ ಭಾರತಿ ಅವರು ತಿಳಿಸಿದರು.