ಜಮೀನು ಖರೀದಿ ವಿವಾದ; ಮೋಸಕ್ಕೆ ಒಳಗಾದ ಮುಖ್ಯ ಶಿಕ್ಷಕ ಆತ್ಮಹತ್ಯೆ

ಹೊಸಕೋಟೆ: ಜಮೀನು ಖರೀದಿ ಮಾಡುವುದಾಗಿ ಹೇಳಿ ಕರಾರು ಬರೆಯಿಸಿಕೊಂಡು ಹಣ ನೀಡದೆ ಮೋಸ ಮಾಡಿದ್ದರಿಂದ ನೊಂದು ಹೊಸಕೋಟೆ ತಾಲೂಕಿನ ಜಡಗನಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡೆತ್ ನೋಟ್ ನಲ್ಲಿ ತಮ್ಮ ಸಂಬಂಧಿಯೇ ಆಗಿರುವ ಸತೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೊಸಕೋಟೆಯ ಜಡಗನಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿದ್ದ ನರಸಿಂಹಮೂರ್ತಿ ಅವರು 2025ರ ಜನವರಿ 15ರಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಮಾಗಡಿ ರಸ್ತೆಯ ತುಂಗಾ ನಗರದಲ್ಲಿ ನರಸಿಂಹಮೂರ್ತಿ ಅವರು 25 ಗುಂಟೆ ಜಮೀನು ಹೊಂದಿದ್ದರು. ಆ ಜಮೀನನ್ನು ರೂ. 10 ಕೋಟಿ ನೀಡಿ ಖರೀದಿಸುವುದಾಗಿ ಒಪ್ಪಿಕೊಂಡಿದ್ದ ಸತೀಶ್ 10 ಲಕ್ಷ ರೂಪಾಯಿ ನೀಡಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಬಾಕಿ ಹಣವನ್ನು ನೀಡದೆ ಜಮೀನು ಲಪಾಟಿಸಿದ್ದರು. ಹಣ ಕೇಳಲು ಹೋದಾಗ ಬೆದರಿಕೆ ಹಾಕಿದ್ದಾರೆ ಎಂದು ನರಸಿಂಹಮೂರ್ತಿ ಮರಣ ಪತ್ರದಲ್ಲಿ ಆರೋಪಿಸಿದ್ದಾರೆ.

ಮುಖ್ಯ ಶಿಕ್ಷಕ ಮೂರ್ತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೃತರ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆಯಲಾಗಿದೆ. ಜಮೀನು ವಿವಾದ ಕುರಿತು ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದೆ. ಡೆತ್ ನೋಟ್ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

More articles

Latest article

Most read