ಮರಕ್ಕೆ ಸಾರಿಗೆ ಸಂಸ್ಥೆ ಬಸ್‌ ಡಿಕ್ಕಿ; ಹಲವು ಶಾಲಾ ಮಕ್ಕಳಿಗೆ ಗಂಭೀರ ಗಾಯ

Most read

ಕೆಆರ್‌ ಪೇಟೆ: ಕೆಎಸ್ಆರ್‌ ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದು  25ಕ್ಕೂ ಹೆಚ್ಚು ಜನರು ಹಾಗು ಶಾಲಾ ಮಕ್ಕಳು ಹಾಗೂ ಪ್ರಯಾಣಿಕರ  ಕೈ ಕಾಲು ಮುರಿದಿರುವ ದುರಂತ ಘಟನೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲ್ಲೂಕಿ‌ನ ಕುಂದನಹಳ್ಳಿ ಗೇಟ್ ಬಳಿ ನಡೆದಿದೆ. ಇವರಲ್ಲಿ 5 ಮಂದಿಯ ಸ್ಥಿತಿ  ಚಿಂತಾಜನಕ ಎಂದು ತಿಳಿದು ಬಂದಿದೆ.

ಈ ಬಸ್‌ ಅಲೇನಹಳ್ಳಿ ಗ್ರಾಮದಿಂದ ಕೆ ಆರ್ ಪೇಟೆಗೆ ಆಗಮಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಮರಕ್ಕೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

More articles

Latest article