ಶಿವಮೊಗ್ಗ : ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ನಗರದಲ್ಲಿರುವ ಕೆಎಸ್ಸಿಎ(ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸ್ಸೋಸಿಯೆಶನ್) ಸ್ಟೇಡಿಯಂ ಸಂರ್ಪೂಣ ಜಲಾವೃತವಾಗಿದೆ.
ಸುಮಾರು 500 ವರ್ಷಗಳಷ್ಟು ಹಳೆಯಾದ ನವುಲೆ ಕೆರೆಯಲ್ಲಿ ಈ ಸ್ಟೇಡಿಯಂ ಅನ್ನು ನಿರ್ಮಿಸಲಾಗಿತ್ತು. ಇದಕ್ಕೆ ಹಲವು ಸ್ಥಳೀಯರು ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೂ ಯಾರೂ ಕಾಳಜಿ ವಹಿಸದೆ ಇಲ್ಲಿ ಕೆರೆಯನ್ನು ಮುಚ್ಚಿ ಸ್ಟೇಡಿಯಂ ನಿರ್ಮಿಸಿರುವುದೇ ಇದಕ್ಕೆ ಕಾರಣ ಎಂದು ಸ್ಥಳಿಯರು ಆರೋಪ ಮಾಡುತ್ತಿದ್ದಾರೆ.
ಮಲೆನಾಡಿನ ಭಾಗದಲ್ಲಿ ಪ್ರತಿ ವರ್ಷ ಸಾಕಷ್ಟು ಮಳೆ ಆಗುತ್ತಿರುತ್ತದೆ. ಇದೆಲ್ಲ ಗೊತ್ತಿದ್ದರು ಕೆರೆಯಲ್ಲಿ ಸ್ಟೇಡಿಯಂ ನಿರ್ಮಾಸಬಾರದಿತ್ತು ಎಂದು ಸ್ಥಳೀಯರ ವಿರೋಧದಲ್ಲಿಯೂ ನಿರ್ಮಿಸಲಾಗಿತ್ತು. ಆದರೆ ಈಗ ನಿರ್ಮಿಸಿರುವ ಸುಂದರವಾದ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸಲು ಹೇಗೆ ಎಂಬುದು ಸ್ಥಳಿಯರ ಪ್ರಶ್ನೆಯಾಗಿದೆ.

