Sunday, September 8, 2024

KPSC ವಿರುದ್ದ ಪ್ರತಿಭಟಿಸಿದ್ದಕ್ಕೆ ಜೈಲು ಪಾಲಾಗಿದ್ದ ಕಾಂತಕುಮಾರ್‌ಗೆ ಜಾಮೀನು : ವಕೀಲರನ್ನು ಶ್ಲಾಘಿಸಿದ ಅಭ್ಯರ್ಥಿಗಳು

Most read

ಇತ್ತೀಚಿಗೆ ಕರ್ನಾಟಕ ಲೋಕಸೇವಾ ಆಯೋಗದ (KPSC) ವಿಳಂಬ ನೀತಿಯನ್ನು ವಿರೋಧಿಸಿ ಅನೇಕ ಅಭ್ಯರ್ಥಿಗಳು ಕಛೇರಿ ಎದುರುಗಡೆ ಮಡಕೆ, ಮೊಟ್ಟೆ ಇಟ್ಟು ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿ ಮುಖಂಡ ಕಾಂತಕುಮಾರ್ ಅನ್ನು ಪೊಲೀಸರು ಬಂಧಿಸಿ ಜಾಮೀನು ರಹಿತ FIR ದಾಖಲು ಮಾಡಿ ಜೈಲಿಗೆ ಕಳಿಸಿದ್ದರು.

ಕರ್ನಾಟಕ ಲೋಕಸೇವಾ ಆಯೋಗದ ವಿಳಂಬ ನೀತಿ ವಿರುದ್ಧ ಕಚೇರಿ ಎದುರು ಮಡಿಕೆ ಇಟ್ಟು ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಮುಖಂಡ ಕಾಂತಕುಮಾ‌ರ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಪೊಲೀಸ್‌ ಕ್ರಮಕ್ಕೆ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಅಭ್ಯರ್ಥಿ ಶ್ರೀ ಕೃಷ್ಣ ಅವರು ಮಾತನಾಡಿ, ಕೆಪಿಎಸ್‌ಸಿ ಯಲ್ಲಿರುವ ಅಧ್ಯಕ್ಷರು ಹಾಗೂ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪ್ರಶ್ನೆ ಮಾಡಿದರೆ ಉಳಿದ ಪರೀಕ್ಷೆಯ ಫಲಿತಾಂಶವನ್ನು ವಿಳಂಬ ಮಾಡುತ್ತೇವೆ ಎಂದು ನೇರವಾಗಿ ಹೇಳ್ತಾರೆ ಇದನ್ನು ಮಾಧ್ಯಮಗಳು ಕೂಡ ವರದಿ ಮಾಡಿವೆ. ಕಾಂತಕುಮಾರ್ ಅವರ ಈ ಕುರಿತು ಪ್ರಶ್ನೆ ಮಾಡಿದಾಗಲೆಲ್ಲ ಅವರ ಮೇಲೆ ಒಂದಲ್ಲ ಒಂದು ರೀತಿ ಆರೋಪ ಮಾಡಿದ್ದಾರೆ. ಮೊನ್ನೆಯಷ್ಟೇ ನಡೆದ ಪ್ರತಿಭಟನೆಯಲ್ಲಿಯೂ ಶಾಂತರೀತಿಯಲ್ಲಿ ವರ್ತಿಸಿದರೂ ಜಾಮೀನು ರಹಿತ ಕೇಸ್ ದಾಖಲಿಸಿ ಜೈಲಿಗೆ ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈತರದ ಕೇಸ್ ನಲ್ಲಿ ಸಿಲುಕಿಸಿದ ಕಾಂತಕುಮಾರ್ ಅವರನ್ನು ಬಿಡಿಗಡೆಗೊಳಿಸಲು ದಾರಿ ತಿಳಿಯದೇ ಇದ್ದಾಗ ವಕೀಲ ಸೂರ್ಯಮುಕುಂದ್ ರಾಜ್ ಅವರನ್ನು ಸಂಪರ್ಕಿಸಿದೆವು. ಅವರು ಈ ಪ್ರಕರಣವನ್ನು ಯಾವುದು ಶುಲ್ಕವಿಲ್ಲದೆ ವಕಾಲತ್ತು ವಹಿಸಲು ತೀರ್ಮಾನಿಸಿ ನಮ್ಮ ಹೋರಾಟಕ್ಕೂ ಬೆಂಬಲ ನೀಡಿದರು. ಇವತ್ತು ಅವರಿಂದಾಗಿ ಜಾಮೀನು ದೊರಕಿದೆ ನಾಳೆ ಕಾಂತಕುಮಾರ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ನಂತರ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

ಈ ಕುರಿತು ಕೆಪಿಎಸ್‌ಸಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಎಕೆಎಸ್‌ಎಸ್ಎ X ನಲ್ಲಿ, ಸೂರ್ಯ ಮುಕುಂದ್ ರಾಜ್ ಸರ್ ಮತ್ತು ತಂಡದವರು ಯಾವುದೇ ಫೀಸನ್ನು ಪಡೆಯದೆ ಉಚಿತವಾಗಿ ಕೆಪಿಎಸ್ಸಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿ ಜಾಮೀನು ರಹಿತ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂತಕುಮಾರ ಅವರನ್ನು ಜಾಮೀನಿನ ಮೂಲಕ ಬಿಡಿಸುವಲ್ಲಿ ನಮ್ಮ ಸಂಘಟನೆಗೆ ನೆರವಾಗಿದ್ದಾರೆ ಮಾನ್ಯರಿಗೆ AKSSA ವತಿಯಿಂದ ಅನಂತ ಧನ್ಯವಾದಗಳು ಎಂದು ತಿಳಿಸಿದೆ.

ಶುಕ್ರವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಕಾಂತಕುಮಾ‌ರ್ ರನ್ನು ಎಳೆದುಕೊಂಡು ಹೋಗಿ ಜಾಮೀನು ರಹಿತ ಪ್ರಕರಣ ದಾಖಲಿಸಿರುವ ವಿಧಾನಸೌಧ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜಾಮೀನು ರಹಿತ ಸೆಕ್ಷೆನ್‌ಗಳ ಅಡಿ ಎಫ್‌ಐಆರ್‌ ದಾಖಲಿಸಿದ್ದರು.

More articles

Latest article