ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೆಪಿಸಿಸಿ ಪುನರ್ ರಚನೆ ಮಾಡಿದ ಎಐಸಿಸಿ

Most read

ಹೊಸದಿಲ್ಲಿ: ಈ ಬಾರಿಯ ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದ್ದು ಪಕ್ಷದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಅದರ ಭಾಗವಾಗಿಯೇ ಎಐಸಿಸಿ ಇದೀಗ ಕೆಪಿಸಿಸಿ ಪುನರ್ ರಚನೆಯನ್ನು ಮಾಡಿದೆ.

ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಂಜಾಂಚಿ, ಮಾದ್ಯಮ ವಿಭಾಗ, ಸಾಮಾಜಿಕ ಜಾಲತಾಣ ವಿಭಾಗಕ್ಕೆ ಹೊಸಬರ ನೇಮಕ ಮಾಡಲಾಗಿದೆ. 43 ಮಂದಿಯನ್ನ ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. 138 ಮಂದಿಯನ್ನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ.

ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ಮಾಜಿ ಎಂಎಲ್‌ಸಿ ರಮೇಶ್ ಬಾಬು, ಮಾಧ್ಯಮ ವಿಭಾಗದ ಉಪಾಧ್ಯಕ್ಷರಾಗಿ ಐಶ್ವರ್ಯ ಮಹದೇವ್, ಖಜಾಂಚಿಯಾಗಿ ವಿನಯ್ ಕಾರ್ತಿಕ್ ಅವರನ್ನೇ ಮುಂದುವರೆಸಲಾಗಿದೆ‌.

ಬಿಎಲ್ ಶಂಕರ್, ಉಗ್ರಪ್ಪ, ವಿ‌ಆರ್ ಸುದರ್ಶನ್, ಎಚ್ ಆಂಜನೇಯ, ರಮಾನಾಥ್ ರೈ, ಮೋಹನ್ ಲಿಂಬಿಕಾಯಿ ಸೇರಿ 43 ಮಂದಿ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಅವರನ್ನು ನೇಮಕಗೊಳಿಸಿ ಎಐಸಿಸಿಯಿಂದ ಆದೇಶ ಹೊರಡಿಸಿದೆ.

ರಾಜ್ಯದ ಏಳು ಜಿಲ್ಲೆಗಳಿಗೆ ಈ ಕೆಳಕಂಡ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.

  • ಬಳ್ಳಾರಿ – ಪ್ರಶಾಂತ್ ಅಲ್ಲಂ ವೀರಭದ್ರಪ್ಪ
  • ಬೆಂಗಳೂರು ಪೂರ್ವ – ಕೆ.ನಂದಕುಮಾರ್
  • ಹಾವೇರಿ – ಸಂಜೀವ್ ಕುಮಾರ್
    ನೀರಲಗಿ
  • ಕೊಪ್ಪಳ – ಅಮರೇಗೌಡ
    ಭಯ್ಯಾಪುರ
  • ಉಡುಪಿ – ಕೃಷ್ಣ ಹೆಗಡೆ
  • ರಾಯಚೂರು – ಬಸವರಾಜ್ ಇಟಗಿ
  • ಶಿವಮೊಗ್ಗ – ಆರ್ ಪ್ರಸನ್ನ ಕುಮಾರ್

More articles

Latest article