ಕೋಲಾರ ಪೋಲೀಸರ ಬೃಹತ್ ಕಾರ್ಯಾಚರಣೆ ; ರೂ. 50 ಲಕ್ಷ ಬೆಲೆಯ MDMA ಡ್ರಗ್ ಜಪ್ತಿ, ಆರೋಪಿ ಬಂಧನ

Most read

ಕೋಲಾರ: ಜಿಲ್ಲಾ ಅಪರಾಧ ವಿಭಾಗದ ಪೋಲೀಸರು ರಾಷ್ರ್ಟೀಯ ಹೆದ್ದಾರಿ ಮಡೇರಹಳ್ಳಿಯ ಸಮೀಪ ಬೆಂಗಳೂರು ಸೂಲದೇವನಹಳ್ಳಿಯ ಮೂಲದ ಸೈಯದ್ ಫುರ್ಖಾನ್ ಎಂಬಾತನನ್ನು ಬಂಧಿಸಿ ಆತನಿಂದ ಸುಮಾರು 50 ಲಕ್ಷ ರೂ. ಬೆಲೆಯ 806 ಗ್ರಾಂ ತೂಕದ ಡಿಜೈನರ್ ಡ್ರಗ್ ಮಾದಕ ವಸ್ತು ( MDMA) ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಸೈಯದ್ ಫುರ್ಖಾನ್ ನೈಜಿರಿಯಾ ಹಾಗೂ ಇತರೆ ದೇಶಗಳಿಂದ MDMA ಮಾದಕ ವಸ್ತುವನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದ. ನಂತರ ಗ್ರಾಂ ಲೆಕ್ಕದಲ್ಲಿ ಹೆಚ್ಚಿನ ಬೆಲೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೋಲೀಸ್ ವರಾಷ್ಠಾಧಿಕಾರಿ ನಿಖಿಲ್ ಅವರು, ಜಿಲ್ಲಾ ಪೋಲೀಸ್ ಇತಿಹಾಸಲ್ಲಿ ಮೊದಲ ಬಾರಿಗೆ ಇದೇ ಮೊದ ಬಾರಿಗೆ MDMA ಮಾದಕ ಪದಾರ್ಥವನ್ನು ಜಪ್ತಿ ಮಾಡಲಾಗಿದೆ ಎಂದರು. ಆರೋಪಿ ಸೈಯದ್ ಫುರ್ಖಾನ್ ನನ್ನು ಸೆರೆ ಹಿಡಿಯುವಲ್ಲಿ ಜಿಲ್ಲಾ ಸೈಬರ್ ಇನ್ಸ್ ಫೆಕ್ಟರ್ ಜಗದೀಶ್ ಸಿಬ್ಬಂದಿಗಳಾದ ಅಂಬರೀಶ್ ˌ ಶಿವಾನಂದˌ ಆನಂದ ಕುಮಾರ್ ಮತ್ತು ಅರುಣ್ ಕುಮಾರ್ ರವರನ್ನು ಅವರು ಶ್ಲಾಘಿಸಿದ್ದಾರೆ.
ಶ್ರೀಮಂತ ಕುಟುಂಬದವರು ಸೇರುವ ರೇವ್ ಪಾರ್ಟಿ,
ಕ್ಲಬ್ ಮತ್ತು ರೆಸಾರ್ಟ್ ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.

More articles

Latest article