ಕೋಲಾರದಲ್ಲಿ ಪ್ಲಾಸ್ಟಿಕ್ ಹಾವಳಿ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ನಗರ ಪ್ರದೇಶದ ಬಿಡಾಡಿ ದನಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಅನ್ನು ಆಹಾರ ಎಂದು ಸೇವಿಸುತ್ತಿದ್ದು, ಕೆಜಿಗಟ್ಟಲೆ ಪ್ಲಾಸಿಕ್ಟ್ ತ್ಯಾಜ್ಯವನ್ನು ಸೇವಿಸಿ ಅನಾರೋಗ್ಯಕ್ಕೀಡಾಗುತ್ತಿವೆ.
ನಗರದ ಬಹುತೇಕ ಅಂಗಡಿ ಮುಗ್ಗಟ್ಟುಗಳಲ್ಲಿ ಪ್ಲಾಸ್ಟಿಕ್ ಕವರುಗಳನ್ನು ಯಥೇಚ್ಛವಾಗಿ ಗ್ರಾಹಕನ ಮನೆ ತಲುಪಿ ಅಲ್ಲಿಂದ ನೇರವಾಗಿ ಬೀದಿಯ ಕಸದ ತೊಟ್ಟಿಗೋ ಅಥವಾ ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದು ಆದೆಲ್ಲಾ ಈಗ ವಿಧಿಯಿಲ್ಲದೇ ರಸ್ತೆ ಬದಿಯಲ್ಲಿ ಮೇಯುವ ಬಿಡಾಡಿ ದನ ಕರುಗಳ ಹೊಟ್ಟೆ ಸೇರುತ್ತಿರುವುದರಿಂದ ಮೂಖ ಜೀವಿಗಳು ಕರುಳು ಬೇನೆಯ ವೇಧನೆಯಿಂದ ನರಳಾಡುತ್ತಿದೆ.
ಈ ಬಗ್ಗೆ ಅತಿ ಹೆಚ್ಚು ಕಾಳಜಿವಹಿಸಬೇಕಾದ ನಗರ ಸಭೆ ಮಾತ್ರ ವರ್ಷಕ್ಕೊಮ್ಮೆ ಮಾತ್ರ ಪ್ಲಾಸ್ಟಿಕ್ ರೈಡ್ ನೆಪದಲ್ಲಿ ದಾಸ್ತಾನು ಗೋಡೌನು ಗಳನ್ನು ಕಂಡರೂ ಕಾಣದಂತೆ ನೋಡುತ್ತಾ ಬಸ್ ನಿಲ್ದಾಣದ ಸಮೀಪದಲ್ಲಿನ ಕೆಲವೇ ಕೆಲವು ಅಂಗಡಿ ಮುಗ್ಗಟ್ಟುಗಳಿಗೆ ಎಡತಾಕುತ್ತಾ ನಿಟ್ಟುಸಿರು ಬಿಡುತ್ತಿದೆ.
ಜಿಲ್ಲಾಡಲಿತ ಇದುವರೆಗೂ ಮೂಖ ಜೀವಿಗಳ ಈ ವೇದನೆಯನ್ನಾಗಲೀ, ನಗರದ ತುಂಬೆಲ್ಲಾ ರಾರಾಜಿಸುತ್ತಿರುವ ಕಳಪೆ ಗುಣ ಮಟ್ಟದ ಪ್ಲಾಸ್ಟಿಕ್ ಕವರುಗಳ ಬಗ್ಗೆಯಾಗಲೀ ಕಲೆಕೆಡಿಸಿಕೊಂಡಂತಿಲ್ಲ.