ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿದರು. ಗದ್ದಲದ ನಡುವೆಯೇ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಸೂದೆಯು ಒಮ್ಮೆ ಜಾರಿಗೆ ಬಂದ ನಂತರ, ವಕ್ಫ್ ಆಸ್ತಿಗಳನ್ನು ಮೇಲೆ ಸರ್ಕಾರಕ್ಕೆ ಗಮನಾರ್ಹ ನಿಯಂತ್ರಣವನ್ನು ಹೊಂದುತ್ತದೆ ಎಂಬ ಈ ಕ್ರಮವು ವಿರೋಧ ಪಕ್ಷದ ಸಂಸದರಿಂದ ಪ್ರತಿಭಟನೆಯನ್ನು ಹುಟ್ಟುಹಾಕಿತು. ಇದನ್ನು “ಅಸಂವಿಧಾನಿಕ” ಮತ್ತು ಧಾರ್ಮಿಕ ರೀತಿಯಲ್ಲಿ “ದೇಶವನ್ನು ವಿಭಜಿಸುವ” ಪ್ರಯತ್ನ ಎಂದು ವಿರೋದ ಪಕ್ಷಗಳು ಆರೋಪಿಸಿದವು.
ಸಂಸತ್ತಿನಲ್ಲಿ ವಕ್ಫ್ ಮಸೂದೆಯನ್ನು ಸಮರ್ಥಿಸಿಕೊಂಡ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಈ ಮಸೂದೆಯು ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ, ಯಾರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ, ಈ ಮಸೂದೆಯು ಎಂದಿಗೂ ಹಕ್ಕುಗಳನ್ನು ನೀಡದಿರುವವರಿಗೆ ಹಕ್ಕುಗಳನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.