9 ವರ್ಷದ ವಿದ್ಯಾರ್ಥಿನಿಗೆ ಬಿಎಂಟಿಸಿ ಬಸ್‌ ಡಿಕ್ಕಿ; ಸ್ಥಳದಲ್ಲೇ ಸಾವು

Most read

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಗೆ ಓರ್ವ ಶಾಲಾ ಬಾಲಕಿ ಬಲಿಯಾಗಿದ್ದಾಳೆ. ರಾಜಾಜಿನಗರದ 1ನೇ ಬ್ಲಾಕ್​ ನಲ್ಲಿ ಬಿಎಂಟಿಸಿ ಬಸ್ ಬಸ್ ಹರಿದು ಶಾಲೆಯಿಂದ ಮನೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸಿಗ್ನಲ್ ನಲ್ಲಿ ನಿಂತಿದ್ದ ಬಾಲಕಿ ಭುವನಾಗೆ ಗೆ ಬಸ್‌ ಗುದ್ದಿದೆ. ಆಕೆ ಸ್ಥಳದಲ್ಲೇ ಅಸುನೀಗಿದ್ದಾಳೆ. ಅಪಘಾತದ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ. ರಾಜಾಜಿನಗರ ಖಾಸಗಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದ್ದು, ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಎದುರಿನಲ್ಲಿ ಇಂದು ಬೆಳಗ್ಗೆ ಸಿಗ್ನಲ್‌ ನಲ್ಲಿ ವಾಹನಗಳು ನಿಂತಿದ್ದಾಗ ಏಕಾಏಕಿ ಬಸ್ ಮುಂಭಾಗದಲ್ಲಿದ್ದ 4 ಕಾರು, 4 ಆಟೋ ಒಂದು ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಇದರಿಂದ ವಾಹನಗಳು ಸಂಪೂರ್ಣ ಜಖಂಗೊಂಡಿದ್ದು  ಅದೃಷ್ಟವಶಾತ್ ವಾಹನಗಳಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ

ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವಿ ಬಸ್ ಚಾಲಕನನ್ನು ಬಂಧಿಸಲಾಗಿದೆ.

ನಾಲ್ಕು ದಿನಗಳ ಹಿಂದೆಯಷ್ಟೇ ಕಮಲಾನಗರದಲ್ಲಿ ಬಸ್‌ ಬ್ರೇಕ್‌ ವಿಫಲವಾಗಿ ನಂದಿನಿ ಪಾರ್ಲರ್‌ ಗೆ ನುಗ್ಗಿತ್ತು. ಅದೃಷ್ಟಶತ್‌ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಆದರೆ ನಂದಿನಿ ಪಾರ್ಲರ್​ ಗೆ ಮಾತ್ರ ಹಾನಿ ಉಂಟಾಗಿತ್ತು.

ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಬಿಎಂಟಿಸಿ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದರೂ ಅಪಘಾತಗಳು ನಿಂತಿಲ್ಲ. ಬಸ್‌ ಚಾಲಕರು ಎರಡು ಬಾರಿ ಅಪಘಾತವೆಸಗಿದರೆ, ಅವರನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ. ಬಸ್​ ಚಾಲನೆ ಮಾಡುವಾಗ ಡ್ರೈವರ್‌ ಮೊಬೈಲ್​ ಬಳಕೆ ಮಾಡಿದರೂ ಕೆಲಸದಿಂದ ಅಮಾನತು ಮಾಡಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ.

More articles

Latest article