ಆಹಾರ ಸಾಕು, ಬೇರೆ ಕೊಡಿ… ಈಗ ಕೆ.ಹೆಚ್.‌ ಮುನಿಯಪ್ಪರ ಸರದಿ

ಬೆಂಗಳೂರು : ಆಹಾರ ಇಲಾಖೆ ಸಚಿವನಾಗಿ ಕಾರ್ಯನಿರ್ವಹಿಸಿರುವುದು ಸಾಕು, ಈಗ ಮತ್ತೆ ಅಧಿಕಾರ ಸ್ವೀಕರಿಸುವುದಿಲ್ಲ ಎಂದು ಸಚಿವ ಕೆ.ಹೆಚ್.‌ ಮುನಿಯಪ್ಪ ಹೇಳಿದ್ದಾರೆ. ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಬೇರೆ ಖಾತೆ ಬೇಕು ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ನಂತರ ಇದೀಗ ಕೆ.ಹೆಚ್.‌ ಮುನಿಯಪ್ಪ ಕೂಡ ಅಸಮಾಧಾನ ಹೊರಹಾಕಿದ್ದಾರೆ.

ದೇವನಹಳ್ಳಿಯಲ್ಲಿ ಮಾತನಾಡಿದ ಅವರು, ‘ನಾನು ಆಹಾರ ಇಲಾಖೆ ಸಚಿವನಾಗಿ ಅಧಿಕಾರ ಸ್ವೀಕರಿಸುವುದಿಲ್ಲ. ನಾನು ಯುಪಿಎ ಕೇಂದ್ರ ಸರ್ಕಾರದಲ್ಲೂ ಸಚಿವನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಆದರೆ ಖಾತೆ ಹಂಚಿಕೆಯಲ್ಲಿ ಆಗಿರುವ ಲೋಪವನ್ನು ಹೈಕಮಾಂಡ್ ನಾಯಕರೇ ಸರಿಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಡಿ.ಕೆ. ಶಿವಕುಮಾರ್ ಅವರುಗಳ  ಗಮನಕ್ಕೆ ತಂದಿದ್ದೇನೆ. ಸಂಪುಟದಲ್ಲಿ ಹಿರಿಯರಿಗೆ  ತಕ್ಕಂತಹ  ಗೌರವ ಸಿಗುತ್ತಿಲ್ಲ. ನನ್ನ ಹಿರಿತನವನ್ನು ಪರಿಗಣಿಸುವವರೆಗೆ ನೀಡಲಾಗಿರುವ ಖಾತೆಯನ್ನು ವಹಿಸಿಕೊಳ್ಳುವುದಿಲ್ಲ. ತಪ್ಪು ತಿದ್ದಿ ಕೊಳ್ಳಬೇಕು’ ಎಂದು ಹೇಳಿದ್ದಾರೆ.

More articles

Latest article

Most read