ಗೌತಮ್ ಆಯ್ಕೆಯನ್ನ ಸ್ವಾಗತ ಮಾಡುತ್ತೇನೆ : ಕೆ ಹೆಚ್ ಮುನಿಯಪ್ಪ

ಬೆಂಗಳೂರು: ಕೋಲಾರದಲ್ಲಿ ಕೆ ಹೆಚ್ ಮುನಿಯಪ್ಪ‌ ಹಾಗೂ ರಮೇಶ್ ಕುಮಾರ್ ನಡುವೆ ಟಿಕೆಟ್ ವಿಚಾರದಲ್ಲಿ ಸ್ಪರ್ಧೆಯಿದ್ದ ನಡುವೆ ಹೈಕಮಾಂಡ್ ನಾಯಕರು ಗೌತಮ್ ಗೆ ಟಿಕೆಟ್ ಅನೌನ್ಸ್ ಮಾಡಿದ್ದಾರೆ. ಈ ವಿಚಾರಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದ್ದು, ಹೈಕಮಾಂಡ್ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಹಿಂದಿನಿಂದಲೂ ನಾನು ಹೇಳುತ್ತಾ ಬಂದಿದ್ದೇನೆ. ನಮಗೆ ಬೇಕು ಅಂತಾ ಕೇಳ್ತೀನಿ. ಶಾಸಕರು, ನಾವು ಒಟ್ಟಾಗಿ ಹೋಗಲು ಸಾಧ್ಯವಾಗಲಿಲ್ಲ. ಖರ್ಗೆ ಅವರಿಗೆ, ಹೈಕಮಾಂಡ್ ನಾಯಕರಿಗೆ ಧನ್ಯವಾದಗಳು ತಿಳಿಸುತ್ತೇನೆ. ಅವರೆಲ್ಲ ಮೊದಲು ನನ್ನ ಅಳಿಯನಿಗೆ ಕೊಡಲು ಒಪ್ಪಿದ್ರು, ಆದರೆ ಶಾಸಕರ ವಿರೋಧದಿಂದ ಆಗಲಿಲ್ಲ.

ಗೌತಮ್ ಅವರ ತಂದೆಗೆ ಇತಿಹಾಸ ಇದೆ, ಅವರ ತಂದೆ ಮೇಯರ್ ಆಗಿದ್ದವರು. ಗೌತಮ್ ಆಯ್ಕೆಯನ್ನ ಸ್ವಾಗತ ಮಾಡುತ್ತೇನೆ. ಕಾಂಗ್ರೆಸ್ ಪರ ನಾನು ಕೆಲಸ ಮಾಡುತ್ತೇನೆ. ಕಾಂಗ್ರೆಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಬೇಸರ ಇಲ್ಲ, ಕಾಂಗ್ರೆಸ್ ಬರಬೇಕು, ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಗೆಲುವಿಗೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಿದೆ.

7 ಬಾರಿ ಎಂಪಿ, 10 ವರ್ಷ ಮಂತ್ರಿ, ಸಿಡಬ್ಲ್ಯೂಸಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಲೋಕಸಭೆ ಸೋತ ಬಳಿಕ ಶಾಸಕನಾಗಿ ಮಾಡಿ, ಮಂತ್ರಿ ಮಾಡಿದ್ದಾರೆ. ಕಾಂಗ್ರೆಸ್ ಇನ್ನೇನು ಮಾಡಬೇಕು ನನಗೆ ಎಂದು ಹೈಕಮಾಂಡ್ ನಿರ್ಧಾರವನ್ನು ಸ್ವಾಗತ ಮಾಡುವುದರ ಜೊತೆಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

More articles

Latest article

Most read