ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಮಸೂದೆಯನ್ನು ವಿರೋಧಿಸಿವೆ. ಹಾಗಾದರೆ ಈ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಹೀಗಿವೆ.
- ಆಸ್ತಿಯನ್ನು ವಕ್ಫ್ ಎಂದು ಘೋಷಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡುವ ಸೆಕ್ಷನ್ 40 ಅನ್ನು ಇದು ಅನೂರ್ಜಿತಗೊಳಿಸುತ್ತದೆ.
- ಕೇಂದ್ರ ಹಾಗೂ ರಾಜ್ಯಗಳ ಮಟ್ಟದ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು, ಮಹಿಳೆಯರು ಸದಸ್ಯರಾಗಿರುತ್ತಾರೆ.
. ಆಸ್ತಿಯೊಂದು ವಕ್ಫ್ ಸೇರಿದ್ದೇ ಅಥವಾ ಸರ್ಕಾರಕ್ಕೆ ಸೇರಿದ್ದೇ ಎಂಬುದನ್ನು ಜಿಲ್ಲಾಧಿಕಾರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ತೀರ್ಮಾನಿಸುತ್ತಾರೆ. - ವಕ್ಫ್ ಮಂಡಳಿಯ ಸಿಇಒ ನೇಮಕ ರಾಜ್ಯ ಸರ್ಕಾರದ ಅಧಿಕಾರ. ಮಂಡಳಿಯು ಸೂಚಿಸುವ ಇಬ್ಬರ ಪೈಕಿ ಒಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು, ಆತ ಮುಸ್ಲಿಮೇತರನೂ ಆಗಬಹುದು.
- ವಕ್ಫ್ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಬಹುದು. ಈ ಮೊದಲು ನ್ಯಾಯಮಂಡಳಿಯ ಆದೇಶ ಅಂತಿಮವಾಗಿತ್ತು.
ಅತಿಕ್ರಮಣಕ್ಕೆ ಒಳಗಾಗಿರುವ ಆಸ್ತಿಯನ್ನು ವಕ್ಫ್ ಮಂಡಳಿಯು ಮರಳಿ ಪಡೆಯಲು 12 ವರ್ಷಗಳ ಮಿತಿಗೆ ಇದ್ದ ವಿನಾಯಿತಿಯನ್ನು ತೆಗೆಯಲಾಗಿದೆ.