“ನಾಡಪ್ರಭು ಕೆಂಪೇಗೌಡ”ನ‌ ಚಾರಿತ್ರಿಕ ಅನಾವರಣ

Most read

ಬಹು ನಿರೀಕ್ಷಿತ ಐತಿಹಾಸಿಕ ಚಿತ್ರ”ನಾಡಪ್ರಭು ಕೆಂಪೇಗೌಡ” ಇದೀಗ ತನ್ನ ಮೊದಲ ಪೋಸ್ಟರ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡುತ್ತಿದೆ.

ಮೇರು ಯೋಧ ಮತ್ತು ಬೆಂಗಳೂರಿನ ಕಾರಣಿಕ, ಕೆಂಪೇಗೌಡರ ಜೀವನ ಚರಿತ್ರೆಯನ್ನು ಹೇಳುವ ಕಥೆ “ನಾಡಪ್ರಭು ಕೆಂಪೇಗೌಡ” ಆಗಿದ್ದು,‌ ಇದನ್ನು ಖ್ಯಾತ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ನಿರ್ದೇಶಿಸಲಿದ್ದಾರೆ ಹಾಗೂ ಚಿತ್ರದಲ್ಲಿ ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ನಲ್ಲಿ‌, ಧನಂಜಯ ಅವರ ಐತಿಹಾಸಿಕ ಲುಕ್ ಎಲ್ಲರ‌ ಗಮನ ಸೆಳೆದಿದೆ.

ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಚಿತ್ರವನ್ನು ಡಾ.ಎಂ.ಎನ್.ಶಿವರುದ್ರಪ್ಪ ಮತ್ತು ಶುಭಂ ಗುಂಡಲ‌ ಈಶ್ವರ ಎಂಟರ್ಟೇನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

“ಬಂಗಾರದ ಜಿಂಕೆ”, “ಜನುಮದ ಜೋಡಿ”, “ಕಲ್ಲರಳಿ ಹೂವಾಗಿ” ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ ಮೇರು ನಿರ್ದೇಶಕ ಡಾ.ಟಿ.ಎಸ್
ನಾಗಾಭರಣ ಅವರ ಎರಡು ದಶಕಗಳ ಕನಸಿನ ಕೂಸಾದ “ನಾಡಪ್ರಭು ಕೆಂಪೇಗೌಡ”, ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸದ್ದು ಮಾಡಿರುವ ಜೀವನ ಚರಿತ್ರೆಯ ಕಥನವಾಗಿದೆ. ಹಲವಾರು ವರ್ಷಗಳ ನಂತರ ಮತ್ತೆ ಆಕ್ಷನ್ ಕಟ್ ಹೇಳಲು ಹೊರಟಿರುವ‌ ನಾಗಾಭರಣ ಅವರಿಗೆ ಈ ಚಿತ್ರವು ಕಮ್ ಬ್ಯಾಕ್ ಆಗಲಿದೆ ಎಂಬುದು ಸಿನಿ ಪ್ರೇಕ್ಷಕರ ಅಭಿಪ್ರಾಯ.

More articles

Latest article