ಆರ್‌ ಎಸ್‌ ಎಸ್‌ ಗೆ ಪ್ರಶ್ನೆಗಳ ಸವಾಲು ಎಸೆದ ಕೇಜ್ರಿವಾಲ್‌

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ಸದು, ರಾಜಕೀಯ ಕೆಸರೆರಚಾಟವೂ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ ಎಸ್‌ ಎಸ್‌ ) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಬಿಜೆಪಿಗೆ ಸಂಬಂಧಿಸದತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಕೇಜ್ರಿವಾಲ್ ಕೇಳಿದ ಪ್ರಶ್ನೆಗಳು;

  • ಈ ಹಿಂದೆ ಬಿಜೆಪಿ ಮಾಡಿರುವ ತಪ್ಪುಗಳನ್ನು ಆರ್​ಎಸ್ಎಸ್ ಬೆಂಬಲಿಸುತ್ತದೆಯೇ?
  • ಬಿಜೆಪಿ ನಾಯಕರು ಬಹಿರಂಗವಾಗಿ ಹಣ ಹಂಚುತ್ತಿದ್ದು, ವಾಮ ಮಾರ್ಗದ ಮೂಲಕ ಮತ ಖರೀದಿಗೆ ಆರ್​ಎಸ್ಎಸ್ ಬೆಂಬಲವಿದೆಯೇ?
  • ದಲಿತ ಮತ್ತು ಪೂರ್ವಾಂಚಲ ಮತದಾರರನ್ನು ಕೈ ಬಿಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ದೇಶದಲ್ಲಿ ಸರಿ ಎಂದು ಆರ್‌ಎಸ್‌ಎಸ್ ಭಾವಿಸುತ್ತದೆಯೇ?
  • ಬಿಜೆಪಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆರ್​ಎಸ್ಎಸ್ ಭಾವಿಸುವುದಿಲ್ಲವೇ?

ದೆಹಲಿಯಲ್ಲಿ ಮತಗಳನ್ನು ಖರೀದಿಸಲು ಬಿಜೆಪಿ ಹಣ ಹಂಚುತ್ತಿದೆ ಎಂದು ಕೇಜ್ರಿವಾಲ್ ಕೆಲವು ದಿನಗಳ ಹಿಂದೆ ಗಂಭೀರ ಆರೋಪಗಳನ್ನು ಮಾಡಿದ್ದು, ಇದೀಗ ಆರ್‌ಎಸ್‌ಎಸ್ ಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಆತಿಶಿ ಸೇರಿದಂತೆ ಹಲವು ಎಎಪಿ ನಾಯಕರು ಹಣ ಹಂಚುತ್ತಿರುವ ಆರೋಪ ಮಾಡಿದ್ದರು.

More articles

Latest article

Most read