ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿ ರೌಡಿಶೀಟರ್ ದೀಪು ಕೊಲೆ ಕೇಸ್ನ 24ನೇ ಆರೋಪಿ ಎಂ.ಬಿ.ಕುಮಾರ್ ಆಯ್ಕೆ ಆಗಿದ್ದರು. ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆ ಈಗ ಶ್ರೀರಂಗಪಟ್ಟಣ ಕಸಾಪ ತಾಲ್ಲೂಕು ಅಧ್ಯಕ್ಷರನ್ನು ಪದವಿಯಿಂದ ವಜಾಗೊಳಿಸಲಾಗಿದೆ.
ಶಾಸಕರ ಒತ್ತಡಕ್ಕೆ ಮಣಿದು ಎಂ.ಬಿ.ಕುಮಾರ್ಗೆ ಕಸಾಪ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎನ್ನಲಾಗಿತ್ತು. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ನಡೆಗೆ ಸಾಹಿತ್ಯಾಸಕ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನಲೆ ಎಂ.ಬಿ.ಕುಮಾರ್ ಆಯ್ಕೆ ಅನ್ನು ವಜಾಗೊಳಿಸಿದೆ.
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಿಸೆಂಬರ್ನಲ್ಲಿ ನಡೆಯುವ ನುಡಿಜಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಕೊಲೆ ಆರೋಪಿಗೆ ಅಧ್ಯಕ್ಷ ಸ್ಥಾನ ನೀಡಿ ಕಸಾಪ ಎಡವಟ್ಟು ಮಾಡಿಕೊಂಡಿತ್ತು.
2015ರ ಜನವರಿ 3ರಂದು ರೌಡಿಶೀಟರ್ ದೀಪು ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಎಂ.ಬಿ.ಕುಮಾರ್ 24ನೇ ಆರೋಪಿಯಾಗಿದ್ದರು. ಸದ್ಯ ಜಾಮೀನಿನ ಮೇಲೆ ಹೊರಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.