ಬುದ್ಧ, ಬಸವ, ಅಂಬೇಡ್ಕರ್‌ ದೈವ ಸ್ವರೂಪಿಗಳು, ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು : ಹೈಕೋರ್ಟ್

Most read

ಜನಪ್ರತಿನಿಧಿಗಳು ದೇವರ ಬದಲು, ಬುದ್ಧ, ಬಸವ, ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ತಪ್ಪಲ್ಲ ಎಂದು ಹೈಕೋರ್ಟ್ ಹೇಳುವ ಮೂಲಕ ಒಂಬತ್ತು ಸಚಿವರು ಮತ್ತು 37 ಶಾಸಕರು ಸಂವಿಧಾನದ ಮೂರನೇ ಶೆಡ್ಯೂಲ್ ಉಲ್ಲಂಘಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಡಿಸೆಂಬರ್ 15, 2023 ರಂದು ಆದೇಶ ನೀಡಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಪೀಠವು (Chief Justice Prasanna Varale and Justice Krishna Dixit), “ಭಾರತದಲ್ಲಿ ಜನರು ಮತ್ತು ಅವರ ಚುನಾಯಿತ ಪ್ರತಿನಿಧಿಗಳು ಋಷಿಗಳು, ಸಮಾಜ ಸುಧಾರಕರಿಗೆ ಗೌರವ ಸಲ್ಲಿಸುವುದು ಸಾಮಾನ್ಯ. ಸಮಾಜದ ಉನ್ನತಿಗಾಗಿ ವಿಶೇಷವಾಗಿ, ದೀನದಲಿತ ವರ್ಗಗಳ ಉನ್ನತಿಗಾಗಿ ಕೊಡುಗೆ ನೀಡಿದ ಎತ್ತರದ ವ್ಯಕ್ತಿಗಳಾದ ಭಗವಾನ್ ಬುದ್ಧ, ಜಗಜ್ಯೋತಿ ಬಸವೇಶ್ವರ, ಡಾ. ಬಿ.ಆರ್. ಅಂಬೇಡ್ಕರ್ ಮೊದಲಾದ ಎತ್ತರದ ವ್ಯಕ್ತಿಗಳನ್ನು ದೈವ ಸ್ವರೂಪಿಗಳು ಎಂದು ಪರಿಗಣಿಸಲಾಗಿದೆ. ಮೂರನೇ ಶೆಡ್ಯೂಲ್‌ನಲ್ಲಿ ಸಾಂವಿಧಾನಿಕ ಸ್ವರೂಪಗಳಲ್ಲಿ ಬಳಸಲಾದ ‘ದೇವರು’ ಎಂಬ  ಅರ್ಥವೂ ಅದೇ ಆಗಿದೆ ಎಂದು ಹೇಳಿದ್ದಾರೆ.

ಸಚಿವರು ಮತ್ತು ಶಾಸಕರು ಸಂವಿಧಾನದ 188 ನೇ ವಿಧಿಯನ್ನು ಉಲ್ಲಂಘಿಸಿದ್ದಾರೆ ಮತ್ತು ಅವರ ಸ್ಥಾನದಿಂದ ಅನರ್ಹಗೊಳಿಸಿ ಕಚೇರಿಯಲ್ಲಿ ಉಳಿದಿರುವ ಪ್ರತಿ ದಿನಕ್ಕೆ ದಂಡ ವಿಧಿಸಬೇಕು ಎಂದು ಪಿಐಎಲ್ ಅರ್ಜಿಯಲ್ಲಿ ವಾದಿಸಲಾಗಿದೆ. ಅರ್ಜಿಯನ್ನು ವಜಾಗೊಳಿಸಿದ ಪೀಠವು, “ದೇವನೊಬ್ಬ, ನಾಮ ಹಲವು” ಎಂದು ಹೇಳಿದೆ.

“ಯಾವುದೇ ದೇವರ ಹೆಸರನ್ನು ತೆಗೆದುಕೊಳ್ಳದೆ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಹೇಳಿದ ಕೋರ್ಟ್, ಕೆಲವುಯ ಸಂದರ್ಭಗಳಲ್ಲಿ ಮೆರು ವ್ಯಕ್ತಿಗಳು ಅಂದರೆ  ಬುದ್ಧ, ಬಸವ, ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು. ಇಂಗ್ಲಿಷ್ ನಲ್ಲಿ ದೇವರು ಎಂಬ ಉಲ್ಲೇಖಿಸಿರುವುದುರ ಅರ್ಥವು ಇದೇ ಆಗಿದೆ. ಭಾರತದ ಸಂವಿಧಾನದ ಮೂರನೇ ಶೆಡ್ಯೂಲ್‌ ಕೂಡ ಇದನ್ನೇ ಹೇಳಿದೆ ಎಂದು ಹೇಳಿದ್ದಾರೆ.

ಬೆಳಗಾವಿ ಮೂಲದ ಭೀಮಪ್ಪ ಗುಂಡಪ್ಪ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈ ಮೇಲಿನ ಆದೇಶದ ಮೇರೆಗೆ ಕೋರ್ಟ್ ವಜಾ ಮಾಡಿದೆ.

More articles

Latest article