ಬೆಂಗಳೂರು : ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿಗಳಿಗೆ ಸಾಕಷ್ಟು ಜನ ಟೀಕೆಗಳನ್ನು ಮಾಡುವ ಜೊತೆಗೆ ಬಿಟ್ಟಿ ಭಾಗ್ಯಗಳು ಅಂತ ಗೆಲಿಗಳನ್ನು ಮಾಡಿದ್ದರು. ಇವರಿಗೆ ನಾವು ಸಂವಿಧಾನದ ನೆಲೆಯಲ್ಲಿ ತಿರುಗೇಟು ಕೊಡಬೇಕು ಎಂದು ಹಿರಿಯ ನ್ಯಾಯವಾದಿಗಳಾದ ಸಿ ಎಸ್ ದ್ವಾರಕನಾಥ್ ಹೇಳಿದರು.
ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶದಲ್ಲಿ, ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ಮತ್ತು ಸಾರ್ವತ್ರಿಕ ಮೂಲ ಆದಾಯ ವಿಚಾರ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿ ಗಳ ಪರಿಣಾಮವು ಒಂದು ಕುಟುಂಬಕ್ಕೆ ತಿಂಗಳಿಗೆ ಅಂದಾಜು ನಾಲ್ಕರಿಂದ ಐದು ಸಾವಿರ ಸಿಗುತ್ತಿದ್ದೆ. ಮತ್ತು ಈ ರೀತಿಯ ಐತಿಹಾಸಿ ಯೋಜನೆಗೆ ದೇಶದಲ್ಲಿ ಕರ್ನಾಟಕವೇ ಮೊದಲು ಎಂದರು.
‘ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆದಾಗ 2023 ರಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಎನ್ನುವವರು ಬಂದು ಹಿಂದುಳಿದ, ಅಲೆಮಾರಿ, ಬುಡಕಟ್ಟು ಸಮುದಾಯಗಳ ಜೊತೆಗೆ ರಾಜ್ಯದ ಬಹುಸಂಖ್ಯಾತ ಜನರಿಗೆ ಬಡತನದ ರೇಖೆಯಿಂದ ಮೇಲೆ ಎತ್ತುತ್ತಾರೆ ಎಂದು ಅಂದುಕೊಂಡಿರಲಿಲ್ಲ ಅನ್ಸತ್ತೆ’ ಎಂದು ಹೇಳಿದರು.
‘ನಿರಾವ್ ಮೋದಿ , ವಿಜಯ್ ಮಲ್ಯ ಇನ್ನು ಕೆಲವು ದೇಶದ ಶ್ರಿಮಂತರು 40,000 ಕೋಟಿಗಿಂತ ಹೆಚ್ಚು ರೂಗಳನ್ನು ದೇಶದಲ್ಲಿನ ಬ್ಯಾಂಕ್ ಗಳಿಗೆ ವಂಚಿಸಿದ್ದಾರೆ. ದೇಶದಲ್ಲಿ ಕೇವಲ ಶೇ 5 ರಷ್ಟು ಶ್ರೀಮಂತರು ಶೇ 60 ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಇನ್ನುಳಿದ ಬಹುಸಂಖ್ಯಾತ ಜನರು ಕೇವಲ ಶೇ 3 ರಷ್ಟು ಸಂಪತ್ತನ್ನು ಹೊಂದಿದ್ದಾರೆ’ ಎಂದರು.
ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ರಾಜ್ಯದ 1.2 ಕೋಟಿ ಕುಟುಂಬಗಳನ್ನು ತಲುಪಿ ಬಡತನ ರೇಖೆಗಿಂತ ಮೇಲೆ ಎತ್ತಿದೆ ಜೊತೆಗೆ ಈ ಮೂಲಕ ದೇಶ ವಾಸಿಗಳನ್ನು ಸದೃಡರಾಗಿ ಮಾಡುತ್ತದೆ ಎಂದು ಹೇಳಿದರು.
ರಾಜ್ಯದ ಅಲೆಮಾರಿ ಆದಿವಾಸಿ ಸಮುದಾಯಗಳ ತಲಾ ಆದಾಯ ವರ್ಷಕ್ಕೆ 27 ಸಾವಿರವಿದ್ದು, ಒಂದು ತಿಂಗಳಿಗೆ 2,250 ಮತ್ತು ಒಂದು ದಿನದಕ್ಕೆ 75 ರೂಪಾಯಿ ರೂಪಾಯಿ ತಲಾ ಆದಾಯವಿದೆ. ಇದೇ ಸಂದರ್ಭದಲ್ಲಿ ಅದಾನಿಯ ಆದಾಯ 16 ಸಾವಿರ ಕೋಟಿ ಎಂದರು.
ಭಾರತದಲ್ಲಿ 2024 ಕ್ಕೆ ನಿರುದ್ಯೋಗ ಪ್ರಮಾಣ ಶೇ 6.8% ಗೆ ಕುಸಿದಿದೆ. ಪ್ರಸ್ತುತವಾಗಿ ಶೇ 23% ರಷ್ಟು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದೆವೆ. ರಾಜ್ಯ ಸರ್ಕಾರ ನೀಡುವ ಯುವ ನಿಧಿಯಿಂದ ಯುವಕರು ಸಮಾಜ ದ್ರೋಹಿ ಕೆಲಸಗಳಿಂದ ಹೊರಗಡೆ ಬರುತ್ತಿದ್ದಾರೆ ಎಂದರು. ಬಹಳ ಮುಖ್ಯವಾಗಿ ಹಸಿವಿನ ರೇಖೆಯಲ್ಲಿ 2023 ಕ್ಕೆ ಭಾರತ ದೇಶ 125 ದೇಶದಲ್ಲಿ 111 ಸ್ಥಾನದಲ್ಲಿ ಇದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.