ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಚುನಾವಣಾ ಪ್ರಚಾರ

ಬೆಂಗಳೂರು: ಮಹಾರಾಷ್ಟ್ರದ ಜತ್ ವಿಧಾನಸಭಾ ಕ್ಷೇತ್ರದ ಸಂಕ್ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಮಹಾ ವಿಕಾಸ ಅಘಾಡಿ ಅಭ್ಯರ್ಥಿ ಕಾಂಗ್ರೆಸ್ ನ ವಿಕ್ರಂ ಸಾವಂತ್ ಅವರ ಪರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಶಾಸಕ ಜೆ.ಟಿ. ಪಾಟೀಲ್ ಹಾಜರಿದ್ದರು. ಚುನಾವಣಾ ಪ್ರಚಾರಕ್ಕೂ ಮುನ್ನ ಮುಖ್ಯಮಂತ್ರಿಗಳು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಜಮಖೇಡ್ ತಾಲೂಕಿನ ಚೋಂಡಿಯಲ್ಲಿರುವ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಪುಣ್ಯಲೋಕಕ್ಕೆ ಇಂದು ಭೇಟಿ ನೀಡಿ ಗೌರವ ಸಲ್ಲಿಸಿದರು. ಸಚಿವ ಎಂ.ಬಿ. ಪಾಟೀಲ್, ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಬಾಬಾ ಸಾಹೇಬ್ ತೋರಟ್ ಅವರು ಹಾಜರಿದ್ದರು.

More articles

Latest article

Most read