ಮೈಸೂರು ಮೂಲದ ಫಿಲ್ಮ್ ಮೇಕರ್ ಚಿದಾನಂದ ಎಸ್ ನಾಯಕ್ ಅವರ ‘ಸನ್ ಫ್ಲವರ್ಸ್ ವರ್ ದಿ ಫರ್ಸ್ಟ್ ಒನ್ಸ್ ಟು ನೋ’ ಕಿರುಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಮೂಲಕ ಕನ್ನಡದ ಕಿರುಚಿತ್ರವೊಂದು ಮೊಟ್ಟಮೊದಲ ಬಾರಿ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಮೈಸೂರಿನ ವೈದ್ಯ-ಫಿಲ್ಮ್ ಮೇಕರ್ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ದೂರದರ್ಶನ ವಿಭಾಗದಲ್ಲಿ ತಮ್ಮ ಒಂದು ವರ್ಷದ ಕೋರ್ಸ್‌ನ ಕೊನೆಯಲ್ಲಿ ಈ ಕಿರುಚಿತ್ರ ನಿರ್ಮಿಸಿದ್ದಾರೆ.
ಸನ್ ಫ್ಲವರ್ಸ್ ವರ್ ದಿ ಫರ್ಸ್ಟ್ ಒನ್ಸ್ ಟು ನೋ 16 ನಿಮಿಷಗಳ ಕಿರುಚಿತ್ರವಾಗಿದ್ದು, ಈ ಕಿರುಚಿತ್ರವು ಹುಂಜವನ್ನು ಕದಿಯುವ ಮುದುಕಿಯ ಕುರಿತಾದ ಕನ್ನಡ ಜಾನಪದ ಕಥೆಯನ್ನು ಆಧರಿಸಿದೆ.
ವೈದ್ಯರಾಗಿದ್ದ ಚಿದಾನಂದ ಅವರಿಗೆ ಸಿನಿಮಾ ರಂಗ ಆಕರ್ಷಿಸಿತು. ಕಥೆ ಹೇಳಬೇಕು ಎನ್ನುವ ಆಸೆ ಅವರದ್ದು. ಸಿನಿಮಾಗಳ ಮೂಲಕ ಹೆಚ್ಚಿನದ್ದನ್ನು ಅಭಿವ್ಯಕ್ತಿಪಡಿಸಬಹುದು ಎಂದು ಅವರಿಗೆ ಅನಿಸಿದೆ. ಹೀಗಾಗಿ ಅವರು ಸಿನಿಮಾ ನಿರ್ದೇಶನ ಆಯ್ಕೆ ಮಾಡಿಕೊಂಡರು.
ಕೇನ್ಸ್ ಫಿಲ್ಮ್ ಫೆಸ್ಟಿವಲ್ 2024ರಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಮೇ ತಿಂಗಳಲ್ಲಿ ಪ್ರಶಸ್ತಿ ಪ್ರಧಾನ ಸಹ ಮಾಡಿದ್ದರು. ಈಗ ಈ ಚಿತ್ರ ಆಸ್ಕರ್ ರೇಸ್ನಲ್ಲಿ ಇದ್ದು, ಪ್ರಶಸ್ತಿಗೆ ಅನ್ನೊಂದೆ ಹೆಜ್ಜೆ ಇದೆ.